Advertisement

ಸ್ವಉದ್ಯೋಗದಿಂದ ಯಶಸ್ಸು ಸಾಧಿಸಿ

08:30 AM Jan 25, 2019 | Team Udayavani |

ಬೀದರ: ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದೆ ಬಂದು ಸ್ವಉದ್ಯೋಗಿಗಳಾಗಿ ಜೀವನದಲ್ಲಿ ಯಶಸ್ಸುಗಳಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಹೇಳಿದರು.

Advertisement

ನಗರದ ಶಾರದಾ ಆರ್‌ಸೆಟ್ ಸಂಸ್ಥೆಯಲ್ಲಿ ಬೆಂಗಳೂರಿನ ಅವೇಕ್‌ ಸಂಸ್ಥೆ, ಕಲಬುರಗಿಯ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಭಾಗಿತ್ವದಲ್ಲಿ ಸ್ವಂತ ಉದ್ಯಮ ಪ್ರಾರಂಭ ಮಾಡಲು ಬಯಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗಾಗಿ ಹಮ್ಮಿಕೊಂಡಿದ್ದ ಫ್ಯಾಶನ್‌ ಡಿಸೈನ್‌ಗೆ ಸಂಬಂಧಿದ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಉದ್ಯೋಗಿಗಳಾಗಲು ಇಚ್ಚ್ಚಿಸುವ ಪ್ರಥಮ ತಲೆಮಾರಿನ ಯುವಕ, ಯುವತಿಯರಿಗೆ ತರಬೇತಿ ನೀಡುವುದು ಅತ್ಯಂತ ಆವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‌ ಸ್ಥಾಪಿಸಿರುವ ಸಹಾರ್ದ ರುಡ್‌ಸೆಟ್ ಸಂಸ್ಥೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಜನರಿಗೆ ಕೆಲಸ ಮಾಡುವ ಕೌಶಲ್ಯದ ಜೊತೆಗೆ ಆರ್ಥಿಕ ಲೆಕ್ಕಾಚಾರ, ಉದ್ಯಮಶೀಲ ಗುಣಗಳು, ನಿರ್ವಹಣಾ ಕೌಶಲ್ಯ ಮತ್ತು ಮಾರುಕಟ್ಟೆ ನಿರ್ವಹಣೆಗಳ ಬಗ್ಗೆಯೂ ತರಬೇತಿ ನೀಡುವುದರಿಂದ ರುಡ್‌ಸೆಟ್ ಶಿಬಿರಾಥಿಗಳು ಸ್ವಉದ್ಯೋಗಿಗಳಾಗಿ ಯಶಸ್ವಿಯಾಗುತ್ತಿದ್ದಾರೆ. ತರಬೇತಿ ಪಡೆದವರಿಗೆ ಸ್ವಉದ್ಯೋಗ ಆರಂಭಿಸಲು ಬ್ಯಾಂಕ್‌ ಸಾಲ ಸೌಲಭ್ಯ ಕೂಡ ನೀಡುತ್ತಿದ್ದು, ಬ್ಯಾಂಕ್‌ ಸಾಲ ಪಡೆದು ಬಂಡವಾಳ ಹೂಡುತ್ತಿದ್ದಾರೆ. ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದರು.

ಬೆಂಗಳೂರಿನ ಅವೇಕ್‌ ಸಂಸ್ಥೆಯ ಸದಾಶಿವ ಮಾತನಾಡಿ, ಆರ್ಥಿಕ ಅಭಿವೃದ್ಧಿಯ ಮೂಲಕ ಮಹಿಳೆಯರ ಸಶಕ್ತೀಕರಣಕ್ಕೆ ಮುಡಿಪಾಗಿರುವ ಭಾರತದ ಪ್ರಥಮ ಸಂಸ್ಥೆ ಹಾಗೂ ಸ್ವಾವಲಂಬನೆಯ ದಿಸೆಯಲ್ಲಿ ಸದಸ್ಯತ್ವ ಪಡೆದಿರುವ ಮಹಿಳಾ ಉದ್ಯಮಿಗಳು ನಡೆಸುವ ಸ್ವಯಂ ಸೇವಾ ಸಂಸ್ಥೆಯಾಗಿರುವ ಅವೇಕ್‌ ಸಂಸ್ಥೆಯ ಬಗ್ಗೆ ತಿಳಿಸಿದರು. ಸ್ವಂತ ಉದ್ಯಮ ಪ್ರಾರಂಭ ಮಾಡಲು ಬಯಸುವ ಆಸಕ್ತ ಮಹಿಳೆಯರಿಗೆ, ವಿವಿಧ ನಮೂನೆಯ ಮಹಿಳೆಯರ ಫ್ಯಾಶನ್‌ ಡಿಸೈನ್‌ಗಳಿಗೆ ಸಂಬಂಧಿಸಿದ ಉದ್ಯಮಶೀಲತಾ ಕೌಶಲ್ಯ ವಿಷಯ ಕುರಿತು ಪೂರ್ಣ ಮಾಹಿತಿ ನೀಡಿದರು. ಇಂದಿನ ದಿನಗಳಲ್ಲಿ ಮಹಿಳೆಯರು ಹೊಸ ಉದ್ಯೋಗ ಪ್ರಾರಂಭಿಸಿ ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.

ತರಬೇತುದಾರ ಸದಾಶಿವ ಎಸ್‌.ಯೋಜನೆಗಳ ಕುರಿತು ಮಾಹಿತಿ ನೀಡಿದರು. ಶಾರದಾ ಆರ್‌ಸೆಟ್ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು, ಸಂಪನ್ಮೂಲ ವ್ಯಕ್ತಿ ಎಸ್‌.ಜಿ ಪಾಟೀಲ, ಆಫ್ರೀನ್‌, ನಾಗಮಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next