Advertisement

ಮಾಡಾವು, ಕೈಕಾರ ಸಬ್‌ಸ್ಟೇಷನ್‌ ಕಾಮಗಾರಿ ಶೀಘ್ರ ಮುಗಿಸಿ

11:45 PM Jul 16, 2019 | mahesh |

ಈಶ್ವರಮಂಗಲ: ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯು ಪಂಚಾಯತ್‌ ಅಧ್ಯಕ್ಷೆ ಬೇಬಿ ಜಯರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

Advertisement

ಪಂಚಾಯತ್‌ ಕಾರ್ಯದರ್ಶಿ ಬಾಬು ನಾಯ್ಕ ಎಂ. ಸಭೆಯಲ್ಲಿ ಸುತ್ತೋಲೆ ಮಂಡಿಸಿದರು.

ಮಾಡಾವು ವಿದ್ಯುತ್‌ ಸಬ್‌ಸ್ಟೇಶನ್‌ ಕೇಂದ್ರದ ಅಗತ್ಯದ ಬಗ್ಗೆ ನಿರ್ಣಯ ಕೈಗೊಂಡು ವರದಿ ಕಳಿಹಿಸುವಂತೆ ಸುತ್ತೋಲೆ ಬಂದಿದೆ ಎಂದು ಹೇಳಿದರು. ಸದಸ್ಯರು ಮಾಡಾವು ಸಬ್‌ ಸ್ಟೇಷನ್‌ ಕಾಮಗಾರಿಯನ್ನು ಮೆಸ್ಕಾಂ ಶೀಘ್ರ ಮುಗಿಸಿ ಕೊಡಬೇಕು. ಕೈಕಾರ ಸಬ್‌ ಸ್ಟೇಷನ್‌ ಕಾಮಗಾರಿಯನ್ನೂ ತ್ವರಿತಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ಕೂಡಲೇ ಎರಡು ಕಾಮಗಾರಿಗಳ ವೇಗ ಹೆಚ್ಚಿಸಲು ಮೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಗ್ರಂಥಾಲಯ ಕಟ್ಟಡ ದುರಸ್ತಿ ಮಾಡಿ
ಪಂಚಾಯತ್‌ ಸಮೀಪದ ಗ್ರಂಥಾಲಯದ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಗ್ರಂಥಾಲಯದ ಮೇಲ್ವಿಚಾರಕಿ ಪಂಚಾಯತ್‌ಗೆ ಮನವಿ ನೀಡಿದ್ದಾರೆ ಎಂದು ಕಾರ್ಯದರ್ಶಿ ಹೇಳಿದರು. ಕಟ್ಟಡವನ್ನು ನೆಲಸಮ ಮಾಡುವುದು ಒಳಿತು ಎಂದು ಸದಸ್ಯ ಪ್ರಕಾಶ್‌ ರೈ ಬೈಲಾಡಿ ಸಲಹೆ ನೀಡಿದರು. ಒಂದೇ ಕಟ್ಟಡದಲ್ಲಿ ಗ್ರಂಥಾಲಯ ಮತ್ತು ಗ್ರಾಮ ಲೆಕ್ಕಿಗರ ಕಚೇರಿ ಇರುವುದರಿಂದ ಅವರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ಜಿ.ಪಂ. ಎಂಜಿನಿಯರ್‌ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಎಂದು ಕಾರ್ಯದರ್ಶಿ ರಾಮ ನಾಯ್ಕ ಹೇಳಿದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾಗಿ ನಿಯುಕ್ತಿಗೊಂಡ ಶಾಂತಾರಾಮ ಎನ್‌. ಕರ್ತವ್ಯಕ್ಕೆ ಹಾಜರಾದರು.

Advertisement

ಉಪಾಧ್ಯಕ್ಷೆ ಭವಾನಿ ಕಜೆ, ಸದಸ್ಯರಾದ ರಮೇಶ್‌ ಶೆಟ್ಟಿ, ಮೊದು ಕುಂಞಿ, ಭವಾನಿ, ಜಗನ್ನಾಥ ರೈ, ದಿವ್ಯಾ, ಪಾರ್ವತಿ ಎಂ., ಐತ್ತಪ್ಪ ವೈ.ಜಿ., ಪ್ರೇಮಲತಾ, ವಿನೋದ್‌ ಕುಮಾರ್‌ ರೈ, ಪ್ರಕಾಶ್‌ ರೈ, ದಿನೇಶ್‌ ಜಿ., ಉಮಾವತಿ, ಪುಷ್ಪಲತಾ ಎಂ., ರಕ್ಷಣ್‌ ರೈ, ಪದ್ಮಾವತಿ, ಶಾಲಿನಿ, ಆಶಾ ಕಾರ್ಯಕರ್ತೆಯರಾದ ಪುಷ್ಪಲತಾ, ಮಮತಾ, ಭವಾನಿ ಉಪಸ್ಥಿತರಿದ್ದರು.

ಪಂಚಾಯತ್‌ ಸಿಬಂದಿ ರಾಮ ನಾಯ್ಕ, ಸಂದೀಪ್‌ ಟಿ., ಕವಿತಾ ಜಿ.ಟಿ., ಚಂದ್ರಾವತಿ ಎಂ., ಸವಿತಾ ಬಿ. ಮುಂತಾದವರು ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next