Advertisement

ಭಾರತೀಯ ಆ್ಯತ್ಲೀಟ್‌ಗಳ ದ್ರವ್ಯ ಪರೀಕ್ಷೆ

07:00 AM Apr 04, 2018 | Team Udayavani |

ಗೋಲ್ಡ್‌ಕೋಸ್ಟ್‌: ಭಾರತೀಯ ಆ್ಯತ್ಲೀಟ್‌ಗಳ ಕೊಠಡಿಯಲ್ಲಿ ಸಿರಿಂಜ್‌ ಪತ್ತೆಯಾದ ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ ಸಂಘಟಕರು ದ್ರವ್ಯ ಪರೀಕ್ಷೆಯನ್ನು ತೀವ್ರಗೊಳಿಸಿದ್ದಾರೆ. ಗೇಮ್ಸ್‌ ಆರಂಭಕ್ಕೆ ಮೊದಲೇ ಸಂಘಟಕರು ಸಮೂಹವಾಗಿ ಭಾರತೀಯ ಆ್ಯತ್ಲೀಟ್‌ಗಳ ದ್ರವ್ಯ ಪರೀಕ್ಷೆಗೆ ಮುಂದಾಗಿದ್ದಾರೆ.

Advertisement

ಆರಂಭದಲ್ಲಿ ದ್ರವ್ಯ ಪರೀಕ್ಷೆಗಾಗಿ ಮೂತ್ರದ ಸ್ಯಾಂಪಲ್‌ ನೀಡುವಂತೆ ಭಾರತದ ಎಲ್ಲ ಬಾಕ್ಸರ್‌ಗಳಲ್ಲಿ ಕೇಳಿಕೊಳ್ಳಲಾಯಿತು. ಆಬಳಿಕ ಆಸ್ಟ್ರೇಲಿಯನ್‌ ನ್ಪೋರ್ಟ್ಸ್ ಆ್ಯಂಟಿ ಡೋಪಿಂಗ್‌ ಏಜೆನ್ಸಿ (ಎಎಸ್‌ಎಡಿಎ)ಭಾರತದ ಜಿಮ್ನಾಸ್ಟ್‌ ಮತ್ತು ಈಜುಪಟುಗಳು ಕ್ರೀಡಾಗ್ರಾಮಕ್ಕೆ ಆಗಮಿಸುವ ಮೊದಲೇ ತಮ್ಮ ಮೂತ್ರದ ಸ್ಯಾಂಪಲ್‌ ನೀಡುವಂತೆ ಕೇಳಿಕೊಂಡಿದೆ. ಭಾರತೀಯರನ್ನು ಗುರುತಿಸಿ  ಮತ್ತು ಪರೀಕ್ಷಿಸಿ ಎಂಬುದು ಎಎಸ್‌ಎಡಿಎಯ ಆದೇಶವಾಗಿತ್ತು. 

ಭಾರತೀಯ ಆ್ಯತ್ಲೀಟ್‌ಗಳನ್ನು ಈ ರೀತಿಯಾಗಿ ದ್ರವ್ಯಪರೀಕ್ಷೆಗೆ ಒಳಪಡಿಸುತ್ತಿರುವುದು ಇದು ಸತತ ಮೂರನೇ ಗೇಮ್ಸ್‌ ಆಗಿದೆ. 2014ರ ಗ್ಲಾಸ್ಕೋ ಮತ್ತು 2016ರ ರಿಯೋದಲ್ಲಿ ಕೂಡ ಭಾರತೀಯ ಆ್ಯತ್ಲೀಟ್‌ಗಳನ್ನು ಸಮೂಹವಾಗಿ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next