Advertisement

ಸಂಸ್ಕೃತ ಭಾರತದ ಜೀವ ಭಾಷೆ : ಸುಬ್ರಹ್ಮಣ್ಯ ಶ್ರೀ

08:37 PM Jun 16, 2021 | Team Udayavani |

ವಿದ್ಯಾನಗರ: ಸಂಸ್ಕೃತವು ದೇವ ಭಾಷೆ ಮಾತ್ರವಲ್ಲ ಭಾರತದ ಜೀವ ಭಾಷೆ. ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

Advertisement

ಅವರು ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇದರ ಸಹಯೋಗದೊಂದಿಗೆ ಸಂಸ್ಕೃತ ಭಾರತಿ ಕಾಸರಗೋಡು ಸಾಮಾಜಿಕ ಜಾಲತಾಣದ ಮುಖಾಂತರ ನಡೆಸಿದ ದಶದಿನ ಸಂಸ್ಕೃತ ಸಂಭಾಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಇದನ್ನೂ ಓದಿ : ಸಿಎಂ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ :ಅರುಣ್‌ ಸಿಂಗ್‌

ಸಂಸ್ಕೃತ ಇಂದು ಯಾವುದೇ ಒಂದು ವರ್ಗದ ಜನರ ಭಾಷೆಯಾಗಿಲ್ಲ. ದೇಶದ  ಎಲ್ಲಾ ವರ್ಗದ ಜನರಿಗೂ ಹತ್ತಿರವಾದ ಭಾಷೆ.‌ ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತೀ ಅಗತ್ಯ.‌ ಜನರು ಈ ಶಿಬಿರಗಳನ್ನು ಸದುಪಯೋಗ ಪಡಿಸಿಕೊಂಡು ಸಂಸ್ಕೃತ ಭಾಷೆ ಅಮೃತ ಭಾಷೆ ಎಂಬುದನ್ನು  ಜಗತ್ತಿಗೆ‌ ಸಾರಬೇಕು  ಎಂದರು.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮವನ್ನು  ಉದ್ಘಾಟಿಸಿದರು.

Advertisement

ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು.  ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಅತಿಥಿಯಾಗಿದ್ದರು. ಮಂಗಳೂರು ವಿಭಾಗದ ಸಂಯೋಜಕರಾದ ಸತ್ಯ ನಾರಾಯಣ ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು.  ಸಂಸ್ಕೃತ ಭಾರತೀ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್.ಎಂ.ಉಡುಪ ಕುಂಟಾರು, ಶಿಬಿರದ ಸಂಸ್ಕೃತ ಶಿಕ್ಷಕಿ ಸಂದ್ಯಾ ವಿ ಕೆದಿಲಾಯ ಭಾಗವಹಿಸಿದರು.

ಇದನ್ನೂ ಓದಿ : ಬಿಜೆಪಿಯ ಸಚಿವರು ಹೈಕಮಾಂಡ್ ಪ್ರತಿನಿಧಿಯ ಮುಂದೆ ಅಹವಾಲು ನೀಡಲು ಕ್ಯೂನಲ್ಲಿದ್ದಾರೆ : ಸಿದ್ದು

Advertisement

Udayavani is now on Telegram. Click here to join our channel and stay updated with the latest news.

Next