ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯಿಂದ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಸಿದ ಬಳಿಕ ನ.15ರ ಶುಕ್ರವಾರ ಬೆಂಗಳೂರು – ಮಂಗಳೂರು ಹೆದ್ದಾರಿ ತಡೆ ನಡೆಸಿದ ಘಟನೆ ನಡೆಯಿತು.
ಪ್ರತಿಭಟನಾ ಸಭೆ ನಡೆಸಿದ ಬಳಿಕ ಮನವಿ ಸ್ವೀಕರಿಸಲು ಉನ್ನತ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪ್ರತಿಭಟನಾ ಸಭೆ ನಡೆಸಿದ ಸ್ಥಳದಿಂದ ಗುಂಡ್ಯ ಜಂಕ್ಷನ್ ಗೆ ಆಗಮಿಸಿ ಬೆಂಗಳೂರು – ಮಂಗಳೂರು ಹೆದ್ದಾರಿ ತಡೆ ನಡೆಸಿದರು.
ಹೆದ್ದಾರಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಪ್ರತಿಭಟನಾಕಾರರು ಕುಳಿತು ಆಕ್ರೋಶ ಹೊರ ಹಾಕಿದರು. ಈ ಪರಿಣಾಮ ಮೂರು ರಸ್ತೆಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿತ್ತು.
ಪೊಲೀಸರು ಮನವೊಲಿಸಿದರೂ ಹೋರಾಟಗಾರರು ಹೆದ್ದಾರಿ ತಡೆ ನಡೆಸಿರುವುದನ್ನು ಮುಂದುವರೆಸಿದರು.