ವರದರಾಜ್ (30), ಪಿ.ಪಿ. ಪೌಲೋಸ್ ಅವರ ಪುತ್ರ ಸೈಜಾನ್ ಪಿ.ಪಿ. (38) ಆರೋಪಿಗಳು.
Advertisement
ವರದರಾಜ್ ಹಾಗೂ ಸೈಜಾನ್ ನಾಲ್ಕು ತಿಂಗಳಿಂದ ಕರಿಕ್ಕಳದ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾ. 2ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು.
Related Articles
ಗಾಯತ್ರಿ ಮನೆಯಲ್ಲಿ ಅವರ ಪತಿಯ ಜತೆಗಿದ್ದು, ಪತಿಗೆ ನಡೆದಾಡಲು ಅಸಾಧ್ಯವಾಗಿದೆ. ಇದನ್ನು ತಿಳಿದು ಆರೋಪಿಗಳು ಮೊದಲೇ ಸಂಚು ರೂಪಿಸಿ ಮನೆಯೊಡತಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ ಎಂದು ಗಾಯತ್ರಿ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಆರೋಪಿಗಳ ಬಂಧನಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಗಳಲ್ಲಿ ವರದರಾಜ್ ಚಿತ್ರದುರ್ಗ ಮೂಲದವ ನಾಗಿದ್ದು, ಸೈಜಾನ್ ಧರ್ಮಸ್ಥಳದವನು ಎಂದು ತಿಳಿದುಬಂದಿದೆ.