Advertisement

Subramanya: ಫಸ್ಟ್‌ಲುಕ್‌ ನಲ್ಲಿ ʼಸುಬ್ರಹ್ಮಣ್ಯ’: ಪುತ್ರನ ಸಿನಿಮಾಗೆ ರವಿಶಂಕರ್‌ ನಿರ್ದೇಶನ

12:36 PM Sep 09, 2024 | Team Udayavani |

ನಟ ರವಿಶಂಕರ್‌ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ “ಸುಬ್ರಹ್ಮಣ್ಯ’ ಫ‌ಸ್ಟ್‌ ಲುಕ್‌ ರಿಲೀಸ್‌ ಆಗಿದೆ. ನಟ ಶಿವರಾಜ್‌ ಕುಮಾರ್‌ ಲುಕ್‌ ರಿಲೀಸ್‌ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಉದ್ದನೆಯ ಕೂದಲು ಬಿಟ್ಟು ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ಸುಂದರವಾಗಿ ಅದ್ವೈ ಕಾಣಿಸಿ ಕೊಂಡಿದ್ದಾರೆ.

Advertisement

ಕಾಡು, ನಿಗೂಢ ಪ್ರವೇಶ ದ್ವಾರ, ಅದ್ವೈನನ್ನು ಬೆನ್ನಟ್ಟಿರುವ ತಂಡ ಪೋಸ್ಟರ್‌ನಲ್ಲಿ ಗಮನ ಸೆಳೆಯು ತ್ತಿದೆ. ಸೋಶಿಯೋ- ಫ್ಯಾಂಟಸಿ ಅಡ್ವೆಂಚರ್ಸ್‌ ಶೈಲಿಯ ಸುಬ್ರಹ್ಮಣ್ಯ ಸಿನಿಮಾದ ಶೇ 60 ಕೆಲಸ ಪೂರ್ಣ ಗೊಂಡಿದ್ದು, ಮುಂಬೈನ ರೆಡ್‌ ಚಿಲ್ಲಸ್‌ ಸ್ಟುಡಿಯೋದಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

ಬೆಂಗಳೂರು, ಮುಂಬೈ, ಹೈದರಾಬಾದ್‌ ಮತ್ತು ಚೆನ್ನೈನ ಹಲವಾರು ಸ್ಟುಡಿಯೋಗಳಲ್ಲಿ ಗ್ರಾಫಿಕ್ಸ್‌ ಕೆಲಸಗಳು ನಡೆಯುತ್ತಿವೆ.

ತಿರುಮಲ ರೆಡ್ಡಿ ಹಾಗೂ ಅನಿಲ್‌ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ, ವಿಘ್ನೇಶ್‌ ರಾಜ್‌ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next