ಮೈಸೂರು: ಹಿಂದೂಗಳು ಮತ್ತು ಭಾರತೀಯ ಮುಸ್ಲಿಮರ ಡಿಎನ್‌ಎಗಳು ಬೇರೆಯಲ್ಲ. ಈ ಇಬ್ಬರ ಡಿಎನ್ ಎಗಳು ಒಂದೇ ಆಗಿವೆ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಮೈಸೂರು ಹಿಂದೂ ಫೋರಂ ಆಶ್ರ ಯದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡಿ, ಹೈದರಾಬಾದಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಇದು ಸಾಬೀತಾಗಿದೆ ಎಂದರು.
ಆರ್ಯರು ಮತ್ತು ದ್ರಾವಿಡರ ಬಗ್ಗೆ ಪ್ರಸ್ತಾಪಿಸಿದ ಅವರು, ದಕ್ಷಿಣ ಭಾರತದಲ್ಲಿದ್ದವರನ್ನು ದ್ರಾವಿಡರು ಎಂದು ಕರೆಯಲಾಯಿತು ಅಷ್ಟೇ. ಇವೆರಡೂ ನಿರ್ದಿಷ್ಟವಾದ ಜನಾಂಗವಲ್ಲ ಎಂದರು.
ವೈಜ್ಞಾನಿಕ ಸಂಶೋಧನೆಗಳು ಈಗ ಸಂಸ್ಕೃತ ಭಾಷೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಬ್ರಿಟಿಷರಿಂದಾಗಿ ಭಾರತದಲ್ಲಿ ಇಂಗ್ಲಿಷ್ ಹೆಚ್ಚಾಗಿ ಆವರಿಸಿಕೊಂಡಿತು. ನಾಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕಂಪ್ಯೂಟರ್‌ಗೆ ಸಂಸ್ಕೃತ ಸುಲಭವಾಗಿ ಅರ್ಥವಾಗುವ ಭಾಷೆ ಎಂದು ಹೇಳಿದೆ. ಭವಿಷ್ಯದಲ್ಲಿ ಸಂಸ್ಕೃತ ಭಾಷೆಯ ಮೂಲಕವೇ ಕೃತಕ ಬುದ್ದಿಮತ್ತೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ವಿಜಯನಗರದ ಅರಸರು, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಿಂದೂ ರಾಜರು ಎಂದಿಗೂ ಹೊರಗಿನವರ ಆಕ್ರಮಣವನ್ನು ಸಹಿಸಿಕೊಂಡಿರಲಿಲ್ಲ. ಹಾಗಾಗಿಯೇ ಭಾರತದಲ್ಲಿ ಶೇ 80ರಷ್ಟು ಮಂದಿ ಹಿಂದೂಗಳು ಉಳಿದಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುತ್ತಿ ದ್ದೇವೆ. ನಮ್ಮ ಮುಂದಿನ ಗುರಿ ಕೃಷ್ಣಜನ್ಮಭೂಮಿ ಹಾಗೂ ಕಾಶಿ. ಅಲ್ಲಿರುವ ವಿವಾದಗಳನ್ನೂ ಶಾಂತಿಯುತವಾಗಿಯೇ ಬಗೆಹರಿಸುತ್ತೇವೆ ಎಂದರು.