Advertisement
ಸುಬ್ರಹ್ಮಣ್ಯ ಅವರೇ ಜಾಗೃತಿ ಗೀತೆ ರಚಿಸಿ ಹಾಡಿದ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು. ಬಳಿಕ ಸುಬ್ರಹ್ಮಣ್ಯ ಅವರ ಕಾರ್ಯ ವನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಸುಬ್ರಹ್ಮಣ್ಯ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದ್ದಾರೆ. ಜತೆಗೆ ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಗಳ ಕುರಿತ ವಿಡಿಯೋ ಗೀತೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.
ರಾಜಧಾನಿಗೆ ಪಿಡುಗಾಗಿ ಪರಿಣಮಿಸಿರುವ “ಡ್ರಗ್ ಮಾಫಿಯಾ’ ಕುರಿತು ಜನರಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಮಾಜಿಕ ಸಂದೇಶವುಳ್ಳ ಗೀತೆ ರಚಿಸಿ ವಿಡಿಯೋ ಸಿದ್ಧಪಡಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸುಬ್ರಹ್ಮಣ್ಯ ಅವರಿಗೆ ಸೂಚಿಸಿದ್ದಾರೆ. ಮುಖ್ಯವಾಗಿ ಮಾದಕ ವಸ್ತು ಮಾರಾಟಗಾರರ ಕಾರ್ಯಶೈ ಲಿ, ಮಾದಕ ವಸ್ತು ಸೇವನೆಗೆ ದಾಸರಾಗಿ ಸಂಕಷ್ಟಕ್ಕೆ ಸಿಲುಕುವುದು, ಬಳಿಕ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವಂತಾಗುವುದು, ಹೀಗೆ ಎಲ್ಲ ಆಯಾಮಗಳನ್ನು ಗೀತೆ ಒಳಗೊಂಡಿ ರಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಾದಕ ವಸ್ತುಗಳ ಸೇವನೆಯಿಂದ ಮಕ್ಕಳನ್ನು ದೂರ ಇರಿಸುವ ಬಗ್ಗೆ ಪೋಷಕರು ವಹಿಸಬೇಕಾದ ಎಚ್ಚರಿಕೆ ಕ್ರಮಗಳು. ದಂಧೆ ನಿಯಂತ್ರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆ ಜತೆ ಕೈ ಜೋಡಿಸುವ ಅವಕಾಶಗಳು. ಶಾಲೆ, ಕಾಲೇಜುಗಳು ವಹಿಸಬೇಕಾದ ಕ್ರಮಗಳ ಬಗ್ಗೆಯೂ ಗೀತೆಯಲ್ಲಿ ಮಾಹಿತಿ ಇರಲಿದೆ ಎನ್ನಲಾಗಿದೆ.
Related Articles
Advertisement
ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತುನಗರದ ಜನತೆಗೆ ತಲೆನೋವಾಗಿ ಪರಿಣಮಿಸಿರುವ ಸರಗಳ್ಳರ ಹಾವಳಿ, ಕಳ್ಳರ ಅಪರಾಧ ಶೈಲಿ, ಸಾರ್ವಜನಿಕರು ವಹಿಸಬೇಕಾದ ಜಾಗರೂಕತೆ ಕುರಿತು ಸುಬ್ರಹ್ಮಣ್ಯ ಅವರು ಸಾಹಿತ್ಯ ಬರೆದು ಸ್ವತಃ ಹಾಡಿದ ವಿಡಿಯೋ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಆ.20 ರಂದು “ಸರಗಳ್ಳರಿದ್ದಾರೆ ಜೋಕೆ; ನೀವು ಹುಷಾರಾ ಗಿದ್ರೆ ಓಕೆ’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.