ಸುಬ್ರಹ್ಮಣ್ಯ: ಇಲ್ಲಿನ ಕಾಶಿಕಟ್ಟೆಯಲ್ಲಿ ಹಲವು ವರ್ಷಗಳಿಂದ ಲ್ಯಾಂಡ್ರಿ ನಡೆಸುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 23ರಂದು ಸಂಜೆ ನಡೆದಿದೆ.
Advertisement
ಮೂಲತಃ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸುಜಿತ್ (38) ಮೃತ ವ್ಯಕ್ತಿ. ಅವರು ಪರ್ವತಮುಖೀ ಬಳಿ ಇರುವ ತಮ್ಮ ರೂಂನಲ್ಲಿ ನೇಣು ಬಿಗಿದುಕೊಂಡು ಕೃತ್ಯ ಎಸಗಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.