ಸುಬ್ರಹ್ಮಣ್ಯ: ಬಿಳಿನೆಲೆ ಗ್ರಾಮದ ಪಾಲ್ತಾಜೆ ರಸ್ತೆಯ ನವಜೀವನ ಕಾಲನಿಯ ಸಮೀಪ ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಕಾಳಿYಚ್ಚು ಹಬ್ಬಿದ ಘಟನೆ ನಡೆದಿದೆ.
Advertisement
ಮಾಹಿತಿ ತಿಳಿದ ಶೌರ್ಯ ವಿಪತ್ತು ನಿರ್ವಹಣ ಮರ್ದಾಳ ಘಟಕ ಬಿಳಿನೆಲೆ ವಲಯದ ಸದಸ್ಯರು ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಿದರು. ಅಗ್ನಿಶಾಮಕ ದಳದವರೂ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭ ಶೌರ್ಯ ಘಟಕದ ಸದಸ್ಯರಾದ ಭವಾನಿ ಶಂಕರ, ವಿನೋದ್ ಕೆ.ಸಿ., ರಾಜೇಶ್, ಭರತ ಎಸ್., ಬಿಳಿನೆಲೆ ಪಂಚಾಯತ್ ಅಧ್ಯಕ್ಷ ಶಿವಶಂಕರ್, ಮೆಸ್ಕಾಂ ಲೈನ್‌ಮನ್ ರಮೇಶ್, ಅಗ್ನಿಶಾಮಕ ದಳದ ಸಿಬಂದಿ, ಅರಣ್ಯ ಅಧಿಕಾರಿಗಳು, ಸಿಬಂದಿ, ಸಾರ್ವಜನಿಕರು ಸಹಕರಿಸಿದರು.