Advertisement

ಸುಬ್ರಹ್ಮಣ್ಯ: ಹಲ್ಲೆ ಪ್ರಕರಣ; ಇಬ್ಬರ ಬಂಧನ

12:16 AM Jan 09, 2023 | Team Udayavani |

ಸುಬ್ರಹ್ಮಣ್ಯ : ಜಾಲತಾಣದಲ್ಲಿ ಪರಿಚಯವಾದ ಸುಬ್ರಹ್ಮಣ್ಯದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಭೇಟಿಯಾಗಲು ಬಂದ ಕಲ್ಲುಗುಂಡಿಯ ಹಫೀದ್‌ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ರಾಧಾಕೃಷ್ಣ (45), ವಿಶ್ವಾಸ್‌ ಎನ್‌. (19) ಬಂಧಿತರು. ಜ. 5ರಂದು ಘಟನೆ ನಡೆದಿತ್ತು.

10-12 ಜನ ಅಪರಿಚಿತರ ತಂಡವು ತನ್ನನ್ನು ಕುಮಾರಧಾರಾ ಬಳಿಯ ಕಟ್ಟಡದಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿತ್ತು ಎಂದು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದ ಹಫೀದ್‌ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದ. ಇದೇ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ತಂದೆಯು ಹಫೀದ್‌ ವಿರುದ್ಧ ಪುತ್ರಿಯ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದರು. ಹಫೀದ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೊಲೀಸರು ಅಮಾಯಕರ ಮೇಲೆ ಕೇಸು ಹಾಕುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಶನಿವಾರ ಸುಬ್ರಹ್ಮಣ್ಯ ಠಾಣೆಯ ಮುಂಭಾಗ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಸಂಜೆವರೆಗೂ ಪ್ರತಿಭಟನೆ ನಡೆದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next