ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಯೇನೆಕಲ್ಲಿನಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಯೇನೆಕಲ್ಲು ಮುಖ್ಯ ರಸ್ತೆಯ ಸೇತುವೆಯ ಕೆಳಭಾಗದಲ್ಲಿ ಘಟನೆ ಸಂಭವಿಸಿದೆ. ಧರ್ಮಪಾಲ ಪರಮಲೆ (46 ವ.) ಮತ್ತು ಬೆಳ್ಯಪ್ಪ ಚಳ್ಳಂಗಾರು, ಚೊಕ್ಕಾಡಿ (49ವ.) ಮೃತರು ಎಂದು ಗುರುತಿಸಲಾಗಿದೆ.
ಧರ್ಮಪಾಲ ಅವರು ಕೆಲವು ಸಮಯಗಳಿಂದ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಕಸವಿಲೇವಾರಿ ಘಟಕದಲ್ಲಿ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಳೆಯಲ್ಲಿದ್ದ ಪಂಪಿನ ಫೂಟ್ ವಾಲ್ ತೆಗೆಯಲು ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿರಬಹುದೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.
Related Articles
ಇದನ್ನೂ ಓದಿ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧೆ