Advertisement
ರಾಜ್ಯದಲ್ಲಿ ಅತ್ಯಧಿಕ ಆದಾಯ ಗಳಿಸುವ ಮುಜರಾಯಿ ಇಲಾಖೆಯ ದೇಗುಲ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಸ್ತೆ ಕುಮಾರ ಧಾರಾ-ಕಾಶಿಕಟ್ಟೆ ನಡುವೆ ಹದಗೆಟ್ಟಿತ್ತು. ನಗರದೊಳಗಿನ ಇತರ ರಸ್ತೆಗಳೂ ತೀವ್ರವಾಗಿ ಹದಗೆಟ್ಟಿದ್ದವು. ಇದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದರು.180 ಕೋಟಿ ರೂ. ಮಾಸ್ಟರ್ ಪ್ಲಾನ್ ಕ್ಷೇತ್ರದ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಜಾರಿಯಲ್ಲಿದೆ. ಇದರಲ್ಲಿ ಎರಡನೇ ಹಂತದ ಕಾಮಗಾರಿಯಲ್ಲಿ 8.055 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ 68.60 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ 2.46 ಕಿ.ಮೀ. ರಸ್ತೆ, ದೇವಸ್ಥಾನದ ಅಧೀನದಲ್ಲಿರುವ 5.014 ಕಿ.ಮೀ. ಮತ್ತು ಪಂಚಾಯತ್ ರಸ್ತೆಗಳ ಭಾಗವಾದ 581 ಮೀ. ಉದ್ದದ ರಸ್ತೆಗಳು ಸೇರಿವೆ.
Related Articles
Advertisement
ಕಟ್ಟಡ ಮಾಲಕರಿಗೆ ಸೂಚನೆ ಕುಮಾರಧಾರಾ ಭಾಗದಿಂದ ಕಾಮಗಾರಿಗೆ ಚಾಲನೆ ದೊರಕಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣ ವೇಳೆ ರಸ್ತೆ ಬದಿ ಇರುವ ಕಟ್ಟಡಗಳ ತೆರವು ನಡೆಸಲು ಸಂಬಂಧಿಸಿದ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ. ಮುಖ್ಯ ಪೇಟೆಯ ಶ್ರೀನಿಕೇತನ ವಸತಿಗೃಹದ ಬಲಬದಿಯ ಸರಕು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.
ಅಂಗಡಿಗಳನ್ನು ಪಕ್ಕದಲ್ಲೆ ತಾತ್ಕಾಲಿಕ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ಕಟ್ಟಡಗಳ ತೆರವು ಕಾರ್ಯ ಶೀಘ್ರ ನಡೆಯಲಿದೆ. ರಸ್ತೆ ಅಭಿವೃದ್ಧಿ ನಡೆಸಲು ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಹಾಲಾಡಿ ದಯಾನಂದ ಶೆಟ್ಟಿ ಗುತ್ತಿಗೆ ವಹಸಿಕೊಂಡಿದ್ದಾರೆ.
ಸತತ ಒತ್ತಡದಿಂದ ಯಶಸ್ಸು ಬಹುಕಾಲದ ಬೇಡಿಕೆಗೆ ಮಾಸ್ಟರ್ ಪ್ಲಾನ್ ಜಾರಿಯಲ್ಲಿದ್ದರೂ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಸರಕಾರದ ಅನುಮೋದನೆ ಸಿಕ್ಕಿರಲಿಲ್ಲ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು ಆಡಳಿತ ಮಂಡಳಿಗೆ ತಲೆನೋವಾಗಿತ್ತು. ರಸ್ತೆ ಅಭಿವೃದ್ಧಿ ಕುರಿತಂತೆ ಈಗಿನ ಆಡಳಿತ ಮಂಡಳಿ ಅಧ್ಯಕ್ಷರು ಸತತವಾಗಿ ಸರಕಾರದ ಮೇಲೆ ಒತ್ತಡ ತಂದು ಕಾಮಗಾರಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಮಗಾರಿ ಪೂರ್ಣವಾದ ಬಳಿಕ ಕುಕ್ಕೆ ನಗರದ ರಸ್ತೆಗಳು ಸ್ಮಾರ್ಟ್ ಆಗಲಿವೆ.