ಭಾಲ್ಕಿ: ಶಾಲಾ ಮುಖ್ಯಶಿಕ್ಷಕರು ತಮ್ಮ ಶಾಲೆಯ ಶೈಕ್ಷಣಿಕ ಮಾಹಿತಿಗಳನ್ನು ಕಟ್ಟುನಿಟ್ಟಾಗಿ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು ಎಂದು ಬಿಆರ್‌ಪಿ ಆನಂದ ಹಳೆಮಂಬರೆ ಹೇಳಿದರು.
ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಮೊರಂಬಿ ಮತ್ತು ಕಲವಾಡಿ ಕ್ಲಸ್ಟರ್ ಮಟ್ಟದ ಮುಖ್ಯಗುರುಗಳ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರು ಮೈಯಲ್ಲಾ ಕಣ್ಣಾಗಿ ಕಾರ್ಯ ನಿರ್ವಹಿಸಬೇಕಿದೆ. ಸರ್ಕಾರ ಕೇಳುವ ಯಾವುದೇ ಮಾಹಿತಿಯು ತಕ್ಷಣವೇ ಒದಗಿಸಬೇಕಾಗಿದೆ. ವಿದ್ಯಾರ್ಥಿಗಳ ಎಲ್ಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗಿರುವುದರಿಂದ ಯಾವ ವಿದ್ಯಾರ್ಥಿಯ ಮಾಹಿತಿಯು ತಪ್ಪದಂತೆ ಭರ್ತಿ ಮಾಡಬೇಕು. ವಿದ್ಯಾರ್ಥಿಗಳ ಪ್ರತಿಯೊಂದು ಅಪ್‌ಡೇಟ್ ಮಾಹಿತಿಗಳನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಸಿಆರ್‌ಪಿ ಸಂತೋಷ ವಾಡೆ ಮಾತನಾಡಿದರು. ಸ್ಥಳೀಯ ಪ್ರೌಢಶಾಲೆ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಬಸವರಾಜ ಬಡದಾಳೆ, ಮುಖ್ಯ ಶಿಕ್ಷಕಿ ಅರುಣಾ ಘಂಟೆ ಉಪಸ್ಥಿತರಿದ್ದರು.