Advertisement

ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

05:51 PM Dec 08, 2021 | Team Udayavani |

ಜಮಖಂಡಿ: ತಾಲೂಕಿನ ಗೋಠೆ ಗ್ರಾಮದ ರೈತರ ಜಮೀನನ್ನು ಕೆರೆ ನಿರ್ಮಾಣಕ್ಕೆ ಸ್ವಾಧೀನಗೊಳಿಸಿ ಕೊಂಡಿದ್ದು, ಭೂಸ್ವಾಧೀನಕ್ಕೊಳಗಾದ ಜಮೀನಿನ ರೈತರಿಗೆ ಸೂಕ್ತ ಪರಿಹಾರ ನೀಡದೇ ಇರುವುದನ್ನು ಅವಲೋಕಿಸಿದ ನ್ಯಾಯಾಲಯ ಜಮಖಂಡಿ ಉಪವಿಭಾಗಾಧಿಕಾರಿ ಕಚೇರಿ ಪೀಠೊಪಕರಣ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಲಾಗಿದೆ.

Advertisement

ಅದರಂತೆ ನ್ಯಾಯಾಲಯದ ಸಿಬ್ಬಂದಿ ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ಮೂರು ಕಂಪ್ಯೂಟರ್‌, ಒಂದು ಪ್ರಿಂಟರ್‌, ಒಂದು ಝರಾಕ್ಸ್‌ ಮಶೀನ ಸಹಿತ ಪೀಠೊಪಕರಣಗಳನ್ನು ಜಪ್ತಿ ಮಾಡುವ ಮೂಲಕ ನ್ಯಾಯಾಲಯ ವಶಕ್ಕೆ ಪಡೆದಿದೆ.

ತಾಲೂಕಿನ ಗೋಠೆ ಗ್ರಾಮದ ಬಳಿ ಜಿನುಗು ಕೆರೆ ನಿರ್ಮಾಣಕ್ಕಾಗಿ ಅಲ್ಲಿನ ರೈತರ ಜಮೀನನ್ನು ಭೂಸ್ವಾ ಧೀನ ಪಡಿಸಿಕೊಳ್ಳಲಾಗಿತ್ತು. ಸುಮಾರು 5 ಎಕರೆ ಜಮೀನಿಗೆ ಹೆಚ್ಚುವರಿ ಭೂ ಪರಿಹಾರಧನ ನೀಡುವಂತೆ ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ 2017 ಅ.23ರಂದು ನೀಡಿರುವ ತೀರ್ಪಿನಂತೆ ಭೂ ಮಾಲೀಕರಿಗೆ ಹೆಚ್ಚುವರಿ ಭೂ ಪರಿಹಾರಧನ 55,28,009-00 ರೂ.ಗಳನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡಿತ್ತು.

ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿ ಅಥವಾ ನೌಕರರು ತಮ್ಮ ಸ್ವಂತಖರ್ಚಿನಲ್ಲಿ ಬಡ್ಡಿ ನೀಡಬೇಕು. ವೆಚ್ಚವನ್ನು 2021-22ನೇ ಸಾಲಿನ ಆಯವ್ಯಯ ಲೆಕ್ಕ ಶಿರ್ಷಿಕೆಯಡಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಅನುದಾನ ಬಿಡುಗಡೆ ಮಡುವಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ತಾಲೂಕಿನ ಗೋಟೆ ಗ್ರಾಮದ ಭೂಮಾಲೀಕರಾದ ಗದಿಗೆಪ್ಪ ನಾಗೇಶ್ವರ್‌, ಭೀಮಪ್ಪ ಸಂಗಪ್ಪ ಹನಗಂಡಿ, ಸುರೇಶ ಕಂಬಾಗಿ, ನಿಂಗಪ್ಪ ತಳಸಂಗ ಸೇರಿದಂತೆ ರೈತರಿಗೆ ಸರ್ಕಾರದ ಅಧಿಧೀನ ಕಾರ್ಯದರ್ಶಿಗಳು ಪರಿಹರಧನ ಬಿಡುಗಡೆ ಬಗ್ಗೆ ಪತ್ರ ಮುಖೇನ ತಿಳಿಸಿದ್ದು, ಇಲ್ಲಿನ ಉಪವಿಭಾಗಾಧಿಕಾರಿ ಹಣ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಹಣ ಜಮಾ ಆಗಿಲ್ಲ
ಉಪವಿಭಾಗಾಧಿಕಾರಿ ಕಚೇರಿಯ ಸಂಬಂಧಿಸಿದ ನೌಕರರ ಪ್ರಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ ಇನ್ನೂವರೆಗೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರದ ಕೆ-2 ತಾಂತ್ರಿಕ ತೊಂದರೆಯಿಂದ ಹಣ ಜಮಾವಣೆಗೊಂಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಸರ್ಕಾರದ ದ್ವಂದ ನೀತಿ, ಆಡಳಿತ ವೈಖರಿಯಿಂದಾಗಿ ಕಳೆದ 4-5 ವರ್ಷಗಳಿಂದ ರೈತರು ಭೂಮಿ ಕಳೆದುಕೊಂಡು ನ್ಯಾಯಾಲಯ-ಕಚೇರಿಗೆ ಅಲೆದಾಡುವ ಸ್ಥಿತಿ ಬಂದಿದೆ ಎಂದು ಫಲಾನುಭವಿಗಳು
ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next