Advertisement

ಭೂ ಪರಿಹಾರ ನೀಡಲು ನಿರ್ಲಕ್ಷ್ಯ: ಉಪವಿಭಾಗಾಧಿಕಾರಿ ವಾಹನ ಜಪ್ತಿ

03:48 PM Jun 28, 2022 | Team Udayavani |

ಪಾಂಡವಪುರ: ಪಟ್ಟಣದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಜಮೀನು ನೀಡಿದ ರೈತರಿಗೆ ಪರಿಹಾರ ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿ ಮಾಡಲಾಯಿತು.

Advertisement

ಏನಿದು ಪ್ರಕರಣ?: ಪಾಂಡವಪುರ ಪಟ್ಟಣದಲ್ಲಿ 2006 ರಲ್ಲಿ ನಿರ್ಮಾಣಗೊಂಡ ಒಳಚರಂಡಿ ವ್ಯವಸ್ಥೆಯ ಮಲಿನ ನೀರು ಸಂಸ್ಕರಣೆ ಮಾಡಲು ಪಟ್ಟಣದ ಹೊರವಲಯದಲ್ಲಿ ರೈತರ 5.20 ಎಕರೆ ಭೂಮಿಯನ್ನು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ 2008 ಮತ್ತು 2009ರಲ್ಲಿ ಸ್ವಾ ಧೀನಪಡಿಸಿಕೊಂಡಿತ್ತು. ಈ ವೇಳೆ ರೈತರಿಗೆ ಅಲ್ಪ ಮೊತ್ತದ ಪರಿಹಾರ ನೀಡಲು ಮುಂದಾಯಿತು. ಪರಿಹಾರದ ಮೊತ್ತಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವಕಾಶ ನೀಡದೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹೋರಾಟ ನಡೆಸಿ, ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಆದೇಶಿಸಿ 3 ವರ್ಷ ಕಳೆದರೂ ಪರಿಹಾರ ನೀಡಿರಲಿಲ್ಲ : ರೈತರ ಮನವಿಯನ್ನು ಪುರಸ್ಕರಿಸಿದ ಪಾಂಡವಪುರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ, ರೈತರ ಜಮೀನಿಗೆ ಪರಿಹಾರ ನೀಡಲು ಆದೇಶಿಸಿತ್ತು. ನ್ಯಾಯಾಲಯ ಆದೇಶ ನೀಡಿ ಮೂರು ವರ್ಷ ಕಳೆದರೂ ನ್ಯಾಯಾಲಯದ ಆದೇಶ ಪಾಲಿಸಿದ ಉಪವಿಭಾಗಾಧಿ ಕಾರಿಗಳ ನಡೆ ಪ್ರಶ್ನಿಸಿ ರೈತ ಸತ್ಯನಾರಾಯಣ ಎಂಬವರು ಅ ಧಿಕಾರಿಗಳ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ್ದರು. ಹೀಗಾಗಿ ಕೋರ್ಟ್‌ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿಗೆ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next