Advertisement

ಸುಬ್ಬು-ಶಾಲಿನಿ ಪ್ರಕರಣಂ-10

06:00 AM Jun 03, 2018 | |

ಸುಬ್ಬು ಸಾರ್‌ ಅರ್ಧಗಂಟೇìಲಿ ಐದು ಸಲ ಫೋನ್‌ ಮಾಡಿದ್ದರು, ಏನೋ ಅರ್ಜೆಂಟಂತೆ” ಆಫೀಸಿಗೆ ಕಾಲಿಡುತ್ತಲೇ ನನ್ನ ಪಿಎ ಮಣಿ ಹೇಳಿದಳು.
ಸುಬ್ಬು ಯಾನೆ ಸುಭಾಶ್‌ ನನ್ನ ಸಹೋದ್ಯೋಗಿ. ಅವನ ಅರ್ಜೆಂಟು ತಲೆ ಹೋಗುವಂಥಾದ್ದಲ್ಲ ಎಂದು ಗೊತ್ತಿದ್ದರೂ ಫೋನಾಯಿಸಿದೆೆ.

Advertisement

“”ಅರ್ಧಗಂಟೆಯಿಂದ ಎಲ್ಲಿ ಹಾಳಾದ್ದೆ?” ರೇಗಿದ ಸುಬ್ಬು.
“”ಜಿಎಮ್ಮು ಕರೆಸಿದ್ರು… ನಿಂದೇನು ಅರ್ಜೆಂಟು”
“”ಫೋನಲ್ಲಿ ಹೇಳ್ಳೋಕಾಗೊಲ್ಲ ತತ್‌ಕ್ಷಣ ನನ್ನ ಡಿಪಾರ್ಟ್‌ಮೆಂಟಿಗೆ ಬಾ” ಸುಬ್ಬು ಆತುರಪಡಿಸಿದ.
“”ಈಗಾಗೊಲ್ಲ. ಕ್ಯಾಂಟೀನಿನಲ್ಲಿ ಸಿಗ್ತಿನಿ. ಹೇಗೂ ಲಂಚ್‌ ಟೈಮ್‌ ಬಂತಲ್ಲ?” ಎಂದೆ.
ಮಧ್ಯಾಹ್ನ ಫ್ಯಾಕ್ಟ್ರಿ ಕ್ಯಾಂಟಿನಲ್ಲಿ ಸುಬ್ಬು ನನಗಿಂತ ಮೊದಲೇ ಕೂಳು ಕತ್ತರಿಸುತ್ತಿದ್ದ. ನನ್ನ ಕಾರ್ಖಾನೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿಯೇ ಇದ್ದರೂ ಅಲ್ಲಿ ತುಂಬಿರುವವರು ತಮಿಳರು, ತೆಲುಗರು, ಮಲೆಯಾಳಿಗಳು ಮತ್ತು ಉತ್ತರಭಾರತದವರು. ಕನ್ನಡಿಗರು ಮಾತ್ರ ಬೆರಳೆಣಿಕೆಯ ಮಂದಿ. ನನ್ನ ಕಾರ್ಖಾನೆಯೇಕೆ ಕರ್ನಾಟಕದ ಎಲ್ಲ ಕಾರ್ಖಾನೆಗಳಲ್ಲೂ ಕನ್ನಡೇತರರೇ ಹೆಚ್ಚು.  ಇದು ಕನ್ನಡಿಗರ ಹೃದಯ ವೈಶಾಲ್ಯ.

“”ಏನದು ಅರ್ಜೆಂಟು?” ಊಟ ಬಡಿಸಿಕೊಳ್ಳುತ್ತ ಕೇಳಿದೆ.
“”ಅತೀಂದ್ರಿಯ ಶಕ್ತಿಯಲ್ಲಿ ನಿನಗೆ ನಂಬೆ ಇದೆಯಾ?” ಸುಬ್ಬು ಪ್ರಶ್ನೆ ವಿಚಿತ್ರವಾಗಿತ್ತು.
“”ಇದೆಂಥ ಪ್ರಶ್ನೆ ?” ಹುಬ್ಬೇರಿಸಿದೆ.
“”ಉತ್ತರ ಹೇಳು” ಮಾತು ಗಡುಸಾಗಿತ್ತು.
“”ಇಲ್ಲ ಮತ್ತು ಇದೆ”
“”ಹಲ್ಲುದ್ರುಸ್ತೀನಿ! ಎರಡರಲ್ಲಿ ಒಂದು ಹೇಳು”
“”ಇಲ್ಲ”
“”ಮತ್ತೆ ಶಾಲಿನಿಗೆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಾನು ಮಾಡಿ¨ªೆಲ್ಲ, ಆಡಿ¨ªೆಲ್ಲ, ಯೋಚಿಸಿದ್ದೆಲ್ಲ ಹೇಗೆ ತಿಳಿಯುತ್ತೆ?” ಸುಬ್ಬು ಕಂಗಾಲಾಗಿ ನುಡಿದ.
“”ಅರ್ಥವಾಗುವ ಹಾಗೆ ಹೇಳ್ಳೋ ಮಹರಾಯ!”
“”ಮೊನ್ನೆ ಫ್ಯಾಕ್ಟ್ರೀಲಿ ಬ್ಲ್ಯಾಕ್‌ಮನ್‌ ಬಾಲು ಪಾಂಡೆ ಜೊತೆ ಜಗಳ ಆಡಿದ್ದು, ಷೋಕಿಲಾಲ ಶರ್ಮ ನನ್ನ ಹಂಗಿಸಿದ್ದು, ಬಾಲ್ಡಿ ಬಾಸು ಬುಸ್ಸೆಂದಿದ್ದು, ಕ್ಲಬ್‌ನಲ್ಲಿ ಎರಡು ಲಾರ್ಜ್‌ ವಿಸ್ಕಿ ಹಾಕಿದ್ದು- ಎಲ್ಲ ಅಕ್ಷರಶಃ ಎಲ್ಲಾ ಅವಳಿಗೆ ಗೊತ್ತು. ಅದನ್ನೇ ಹಿನ್ನೆಲೆಯಾಗಿಟ್ಟುಕೊಂಡು ನಿನ್ನೆ ಇಡೀ ದಿನ ಹಂಗಿಸಿದಳು. ಅದಕ್ಕೂ ಹಿಂದಿನ ದಿನದ ಎಲ್ಲ ಘಟನೆಗಳೂ ಅವಳಿಗೆ ಗೊತ್ತಿತ್ತು. ಸುಮಾರು ಒಂದು ತಿಂಗಳಿನಿಂದ ಶಾಲಿನಿಗೆ ನನ್ನ ಎಲ್ಲಾ ಚಟುವಟಿಕೆಗಳೂ ಗೊತ್ತಾಗಿ ಚಿಟುಕುಮುಳ್ಳು ಆಡಿಸ್ತಿದ್ದಾಳೆ. ಇದು ಅವಳಿಗೆ ಹೇಗೆ ಸಾಧ್ಯವಾಯಿತು? ಅವಳಿಗೆ ಅತೀಂದ್ರಿಯ ಶಕ್ತಿ ಬಂದಿರೋಕೆ ಸಾಧ್ಯವೆ?”
ಸಮಸ್ಯೆ ನನಗೆ ಮನದಟ್ಟಾಯಿತು.

“”ಅತೀಂದ್ರಿಯ ಶಕ್ತಿಯೂ ಇಲ್ಲ , ಮಣ್ಣಾಂಗಟ್ಟಿಯೂ ಇಲ್ಲ ! ನಿನ್ನ ವಿಷಯಾನೆಲ್ಲಾ ಅತ್ತಿಗೆಗೆ ಯಾರೋ ಹೇಳ್ತಿರಬಹುದು” ಸರಳ ತರ್ಕವನ್ನು ಸುಬ್ಬುನ ಮುಂದಿಟ್ಟೆ.
“”ಹಾಗಾದ್ರೆ, ಅದು… ನೀನೇ ಇರಬೇಕು!” ಸುಬ್ಬು ದುರುಗುಟ್ಟಿ ನೋಡಿದ.
“”ಎಂದಾದರೂ ಇಂಥ ಕೆಲಸ ಮಾಡಿದ್ದೀನಾ?”
ಸುಬ್ಬು ಅಪಾದನೆಗೆ ಕಸಿವಿಸಿಯಾಗಿತ್ತು!
“”ಇದುವರೆಗೂ ಮಾಡಿಲ್ಲ. ಈಗ ಮಾಡ್ತಿರಬಹುದಲ್ಲ?” ಸುಬ್ಬು ಅನುಮಾನ ದಟ್ಟವಾಗಿತ್ತು.
“”ನಿನ್ನ ಅನುಮಾನ ನ್ಯಾಯವಲ್ಲ. ನಾವಿಬ್ಬರೂ ಚಡ್ಡಿದೋಸ್ತ್ ಗಳು. ಎಷ್ಟು ಸಲ ನಿನ್ನನ್ನು ಅಪಾಯಗಳಿಂದ ಪಾರು ಮಾಡಿದ್ದೇನೆ. ದೇವರಾಣೆಗೂ ನಾನಿಂಥ ಕೆಲಸ ಮಾಡಿಲ್ಲ”
ಸುಬ್ಬು ನಿಟ್ಟುಸಿರುಬಿಟ್ಟು ಕುರ್ಚಿಯಲ್ಲಿ ಒರಗಿದ. “”ನನ್ನ ಎಲ್ಲಾ ರಹಸ್ಯಗಳನ್ನೂ ತಿಳ್ಕೊಂಡು ಶಾಲಿನಿ ಮೇಲುಗೈ ಸಾಧಿಸ್ತಾ ಇದ್ದಾಳೆ. ಸಹಿಸೋಕೆ ನನ್ನಿಂದ ಆಗ್ತಿಲ್ಲ” ಸುಬ್ಬು ಹಪಹಪಿಸಿದ.

“”ಇದಕ್ಕೆ ಬೇಜಾರು ಯಾಕೋ ಸುಬ್ಬು? ನಿನ್ನ ಪಾಡಿಗೆ ನೀನು ಸುಮ್ಮನಿರು. ಅದನ್ನೆಲ್ಲ ಯಾಕೆ ಸೀರಿಯಸ್ಸಾಗಿ ತೊಗೋತೀಯಾ?”
“”ಸುಮ್ಮನಿದ್ದರೆ ಎಲ್ಲವನ್ನೂ ಒಪ್ಪಿಕೊಂಡ ಹಾಗಾಗುತ್ತಲ್ಲ?”
“”ಅತ್ತಿಗೆ ಹೇಳ್ಳೋದೆಲ್ಲಾ ನಿಜಾನೂ ಆಗಿರುತ್ತಲ್ಲ !”
“”ಇರಬಹುದು, ಆದರೂ ಅದನ್ನ ನಾನು ಒಪ್ಪೋದಿಲ್ಲ. ನಿಜ ಆದ್ರೂ ಒಪ್ಪದಿರೋದು ನಮ್ಮ ಮೂಲಭೂತ ಹಕ್ಕು” ಸುಬ್ಬು ಭಂಡ‌‌ ವಾದ ಮಾಡಿದ!
“”ಹಾಗಾದ್ರೆ ಏನು ಮಾಡ್ಬೇಕೂಂತಿದ್ದೀಯಾ?” ಮೊಸರನ್ನ ಕಲೆಸುತ್ತ ಕೇಳಿದೆ.
“”ಶಾಲಿನಿ ಬಾಯಿಮುಚ್ಚಿಸೋಕೆ ಏನಾದ್ರೂ ಉಪಾಯ ಹೇಳು” ನಾನು ಅಡ್ಡಡ್ಡ ತಲೆಯಾಡಿಸಿದೆ. 
“”ತಲೆ ಖಾಲಿಯಾಗೋಯ್ತಾ? ಕಾರ್ಖಾನೆ ಸಮಸ್ಯೆಗಳಿಗೆ ನಿನ್ನ ಹತ್ರ ಪರಿಹಾರ ಇದೆ. ಬಾಸುಗಳು ನಮಗೆ ಬುಸ್‌ ಅನ್ತಾರೆ, ಆದ್ರೆ ನಿನ್ನ ಪುಂಗಿಗೆ ತಲೆದೂಗ್ತಾರೆ. ಶಾಲಿನಿ ಕಣ್ಣಲ್ಲಿ ನೀನು ಸರ್ವಜ್ಞ, ಬೃಹಸ್ಪತಿ! ಸಾಹಿತಿ ಬೇರೆ… ನನ್ನನ್ನ ಮಾತ್ರ ಸಾಯಿಸ್ತೀಯ”
“”ಒಂದು ದಿನ ಟೈಮ್‌ ಕೊಡು. ಏನಾದ್ರೂ ಉಪಾಯ ಹುಡುಕ್ತೀನಿ”
“”ಆಯ್ತು. ನಾಳೆ ಇಷ್ಟೊತ್ತಿಗೆ ಐ ವಾಂಟ್‌ ಸಲ್ಯೂಶನ್‌. ಇಲ್ಲಾಂದ್ರೆ ಗೊತ್ತಲ್ಲ?” ಸುಬ್ಬು ಧಮಕಿ ಹಾಕಿದ.

Advertisement

ಅವನ ಧಮಕಿ ಅಂದ್ರೆ ಕೈಸಾಲಕ್ಕೆ ಕೊಕ್ಕೆ ಅಂತ. ಆ ಅಪಾಯದಿಂದ ತಪ್ಪಿಸಿಕೊಳ್ಳಲು ಇದ್ದ ಒಂದೇ ಒಂದು ಅಸ್ತ್ರವೆಂದರೆ ಶಾಲಿನಿಗೆ ಅರ್ಥಾತ್‌ ಸುಬ್ಬೂ ಪತ್ನಿಗೆ ಅವನ ಯಾವ ಚಟುವಟಿಕೆಗಳೂ ತಿಳಿಯಬಾರದಂತೆ ಮಾಡುವುದು.
ಸುಬ್ಬು ಸಮಸ್ಯೆಯನ್ನು ನನಗೆ ವರ್ಗಾಯಿಸಿ ನಿರುಮ್ಮಳವಾಗಿ ಊಟ ಮುಗಿಸಿ ಕೈತೊಳೆದು ಎದ್ದ. ನಾನು ಅವನ ಸಮಸ್ಯೆಯಲ್ಲಿ ಮುಳುಗಿದೆ. 
ನನಗೆ ತಿಳಿದಂತೆ ಶಾಲಿನಿಯತ್ತಿಗೆಗೆ ಯಾವ ವಿಶೇಷ ಶಕ್ತಿಯೂ ಇಲ್ಲ. ಆಕೆಯೊಬ್ಬರು ಗೃಹಿಣಿ, ಮನೆ-ಮಕ್ಕಳು, ಟಿವಿ, ಒಡವೆ, ಸೀರೆ, ಲೇಡೀಸ್‌ ಕ್ಲಬ್ಬುಗಳಲ್ಲಿ ಮುಳುಗಿರುವವರು. ಸಡನ್ನಾಗಿ ಶೆ‌ರ್ಲಾಕ್‌ ಹೋಮ್ಸ್‌ ಆಗಿ ಸುಬ್ಬೂನ ಎಲ್ಲಾ ಚಟುವಟಿಕೆಗಳನ್ನೂ ಅವರು ಬಯಲಿಗೆ ಎಳಿತಿರೋದು ಹೇಗೆ? ತಲೆಕೆರೆದುಕೊಳ್ಳುತ್ತ ಯೋಚಿಸತೊಡಗಿದೆ.

ಡಿಪಾರ್ಟ್‌ಮೆಂಟಿಗೆ ಬಂದರೂ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಸುಬ್ಬು ಸಮಸ್ಯೆ ಕಿತ್ತು ಹೋದ ಚಪ್ಪಲಿಯಂತೆ ಹಿಂಸಿಸುತ್ತಿತ್ತು.
ರಾತ್ರಿ ಮಲಗುವಾಗಲೂ ಸುಬ್ಬು ಸಮಸ್ಯೆ ತಲೆ ತುಂಬಿತ್ತು. ಕಾರ್ಖಾನೆಯಲ್ಲಿ ನಡೆಯೋ ಸುದ್ದಿಗಳು ಶಾಲಿನಿ ಅತ್ತಿಗೆಗೆ ಹೇಗೆ ತಿಳಿಯುತ್ತವೆ? ಕ್ಲಬ್ಬಿನಲ್ಲಿ ಸುಬ್ಬು ಏರಿಸೋ ಗುಂಡಿನ ಲೆಕ್ಕ ಅವಳನ್ನು ಹೇಗೆ ತಲುಪುತ್ತೆ? ಅಥವಾ ಅತ್ತಿಗೆಗೆ  ನಿಜವಾಗಿಯೂ ಅತೀಂದ್ರಿಯ ಶಕ್ತಿ ಬಂದುಬಿಟ್ಟಿದೆಯೇ? ಯೋಗ, ಧ್ಯಾನಗಳಿಂದ ಅತೀಂದ್ರಿಯ ಶಕ್ತಿ ಬಂದಿದೆಯೆ? ಇಲ್ಲಾ ಯಾರಾದರೂ ಪತ್ತೇದಾರನನ್ನು ಸುಬ್ಬೂ ಹಿಂದೆ ಛೂ ಬಿಟ್ಟಿರಬಹುದೆ? ಹಾಗೇನಾದರೂ ಇದ್ದರೆ ಆ ಪತ್ತೇದಾರನಿಗೆ ಫ್ಯಾಕ್ಟ್ರಿಯೊಳಕ್ಕೆ ಬರೋಕೆ ಪರ್ಮಿಶನ್‌ ಸಿಗೋದಿಲ್ಲ. ಇನ್ನು ಕ್ಲಬ್ಬಿನಲ್ಲೂ ಆತ ಕಾಲಿಡಲು ಸಾಧ್ಯವಿಲ್ಲ. ಅತ್ತಿಗೆಗೆ ಅತೀಂದ್ರಿಯ ಶಕ್ತಿ ಸಾಧ್ಯವಿಲ್ಲ. ಹೊರಗಿನ ಪತ್ತೇದಾರನ ಸಾಧ್ಯತೇನೂ ಕಮ್ಮಿ. ಮತ್ತೆ ಎಲ್ಲಿಂದ ಸುದ್ದಿ ಅತ್ತಿಗೆ ಕಿವಿಗೆ ಬೀಳುತ್ತಿದೆ? ಯೋಚಿಸುತ್ತಲೇ ನಿದ್ರೆಗೆ ಜಾರಿದ್ದೆ.
ಬೆಳಿಗ್ಗೆ ಎಂಟೂವರೆಗೇ ಸುಬ್ಬು ಪೋನಲ್ಲಿ ಕಾಡಿದ. 
“”ಐಡಿಯಾ ಸಿಕ್ಕಿದೆ! ಕೆಲವು ವಿಷಯ ಖಾತ್ರಿ ಮಾಡ್ಕೊàಬೇಕು. ಹನ್ನೆರಡಕ್ಕೆ ಬಾ” ಎಂದು ಸುಬ್ಬೂನ ಹನ್ನೆರಡರವರೆಗೂ ಕಟ್ಟಿಹಾಕಿದೆ.

ಹನ್ನೆರಡಕ್ಕೆ ಹತ್ತು ನಿಮಿಷ ಮುಂಚೇನೆ ಸುಬ್ಬು ವಕ್ಕರಿಸಿದ‌. ಮುಖದಲ್ಲಿ ಇಲೆಕ್ಷನ್ನಿನ ಫ‌ಲಿತಾಂಶಕ್ಕೆ ಕಾದ ಪುಢಾರಿಯಂತಿತ್ತು. 
“”ನೇರವಾಗಿ ವಿಷಯಕ್ಕೆ ಬರ್ತೀನಿ. ಅಂದರಿಕಿ ಮಂಚಿವಾಡು ನಿನ್ನ ಡಿಪಾರ್ಟ್‌ಮೆಂಟಿನಲ್ಲಿ ಯಾರು?” ಕೇಳಿದೆ.
“”ಇನ್ಯಾರು; ಕೇಶವುಲು! ಆರು ತಿಂಗಳ ಹಿಂದೆ ಫ್ಯಾಕ್ಟ್ರಿ ಸೇರಿದನಲ್ಲ ಅವನೇ. ನನ್ನ ಅಸಿಸ್ಟೆಂಟು ಬೇರೆ. ಸಿಕ್ಕಾಪಟ್ಟೆ ಮಾತಾಡ್ತಾನೆ. ಬೊಂಬಾಯಿ ಅಂತಾನೂ ಕರೀತೀವಿ. ಎಲ್ಲರನ್ನೂ ಸಿಕ್ಕಾಪಟ್ಟೆ ಹೊಗಳ್ತಾನೆ. ಹೊಗಳುಭಟ್ಟ. ಸರಿ, ಅವನ ವಿಷಯ ಇಲ್ಲಿ ಯಾಕೆ?”
“”ಅದಕ್ಕೆ ಕಾರಣ ಇದೆ. ಅವನ ಮನೆ ಎಲ್ಲಿ?”
“”ನನ್ನ ಮನೆ ಹಿಂದಿನ ಬೀದೀಲಿ”
“”ದಿನಾ ಕ್ಲಬ್ಬಲ್ಲಿ ಸಿಗ್ತಾನಲ್ವಾ?”
“”ಹೌದು. ಬಿಯರ್‌ಪ್ರಿಯ. ದಿನಾ ಒಂದು ಬಾಟಲ್‌ ಗಂಟಲಿಗಿಳಿಸದೆ ಮನೆಗೆ ಹೋಗೋಲ್ಲ”
“”ಅವನ ಮಿಸೆಸ್ಸು ದಿನಾ ನಿಮ್ಮ ಮನೇಗೆ ಆಗಾಗ್ಗೆ ಬರ್ತಿರ್ತಾರಲ್ವಾ?”
“”ಇದೆಲ್ಲಾ… ನಿನಗೆ ಹೇಗೆ ಗೊತ್ತಾಯಿತು?”
“”ನಾನು ಕೇಳಿದ್ದಕ್ಕೆ ಉತ್ತರ ಕೊಡು”
“”ಹೌದು ಬರ್ತಿರ್ತಾರೆ. ಶಾಲಿನಿ ಮತ್ತು ಕೇಶವುಲು ಹೆಂಡ್ತಿ ತುಂಬಾ ಕ್ಲೋಸು. ಇದಕ್ಕೂ ನನ್ನ ಸಮಸ್ಯೆಗೂ ಏನು ಸಂಬಂಧ?”
“”ನೇರವಾದ ಸಂಬಂಧವಿದೆ. ನಿನ್ನ ಖಾಸಗಿ ವಿಷಯಾನ ಶಾಲಿನಿಗೆ ಬಿತ್ತರಿಸುವ ನ್ಯೂಸ್‌ ಚಾನೆ‌ಲ್‌ ಇವನೇ, ಈ ಕೇಶವುಲು. ಫ್ಯಾಕ್ಟ್ರಿಯಲ್ಲಿ ನಡೆದ ನಿನ್ನ ವಿಷಯ, ನೀನು ಕ್ಲಬ್ಬಲ್ಲಿ ಏರಿಸೋ ಗುಂಡಿನ ಲೆಕ್ಕ‌, ಕೇಶವುಲು ತನ್ನ ಹೆಂಡತಿಗೆ ಹೇಳ್ತಾನೆ. ಅದು ಮಾರನೆಯ ದಿನ ಯಥಾವತ್ತಾಗಿ ಶಾಲಿನಿ ಅತ್ತಿಗೆಗೆ ವರದಿಯಾಗ್ತಿದೆ. ಇದೇ ನಿನ್ನ ಸಮಸ್ಯೆಯ ಮೂಲ”
“”ಪಾಪಿ! ಇವತ್ತು ಅವನನ್ನ ಚಚ್ಚಿ ಹಾಕ್ತೀನಿ” ಸಿನೆಮಾ ಖಳನಂತೆ ಸುಬ್ಬು ಕಟಕಟ ಹಲ್ಲುಕಡಿಯುತ್ತ ಎದ್ದ.
“”ಕೂಲ್‌ಡೌನ್‌ ಸುಬ್ಬು. ಒರಟಾಟ ಬೇಡ. ನಾಜೂಕಾಗಿ ಸಾಲ್‌Ì ಮಾಡು. ನೀನೇ ಡಿಪಾರ್ಟ್‌ಮೆಂಟ್‌ ಹೆಡ್‌. ಮೊದ್ಲು ಅವನನ್ನು  ನಿನ್ನ ಡಿಪಾರ್ಟ್‌ಮೆಂಟಿಂದ ಆಚೆ ಹಾಕು. ನೆಕ್ಸ್ಟ್ ಕ್ಲಬ್‌ನಲ್ಲಿ ಅವನನ್ನು ಅವಾಯ್ಡ ಮಾಡು, ಎಲ್ಲಾ ಸರಿಹೋಗುತ್ತೆ. ಯೋಚೆ° ಮಾಡಿ ಕೆಲಸ ಮಾಡು. ದುಡುಕಬೇಡ” ಎಂದು ಉಪದೇಶಿಸಿದೆ.

ಸುಬ್ಬು ತನ್ನ ಡಿಪಾರ್ಟ್‌ಮೆಂಟಿಗೆ ನಡೆದ. 
ವಾರದ ನಂತರ ಕೇಶವುಲು ಬೇರೆ ಡಿಪಾರ್ಟ್‌ಮೆಂಟಿಗೆೆ ರಿಪೋರ್ಟ್‌ ಮಾಡ್ಕೊಂಡನಂತೆ. ಅವತ್ತೇ ಸುಬ್ಬು ನನ್ನ ಡಿಪಾರ್ಟ್‌ಮೆಂಟಿಗೆ ಅರ್ಧ ಕೆಜಿ ಮೈಸೂರ್‌ಪಾಕು ಹಿಡಿದು ಬಂದಿದ್ದ.
“”ಏನು ವಿಶೇಷ?” ಕೇಳಿದೆ.
“”ಶಾಲಿನಿಯ ಬಾಯಿ ಬಂದ್‌ ! ಪರ್ವಾಗಿಲ್ಲ, ಒಂದೊಂದ್ಸಲ ನೀನೂ ಕೆಲಸಕ್ಕೆ ಬರ್ತಿàಯಾ” ಎಂದು ಸುಬ್ಬು ಸ್ವೀಟ್‌ ಪ್ಯಾಕೆಟ್‌ ಟೇಬಲ್‌ ಮೇಲಿಟ್ಟು ಕಣ್ಣು ಮಿಟುಕಿಸಿದ.

ಎಸ್‌. ಜಿ. ಶಿವಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next