Advertisement

ಉಪನೋಂದಣಿ ಕಚೇರಿ ಕಾರ್ಯ ಸ್ಥಗಿತ

04:41 PM Jun 23, 2022 | Team Udayavani |

ಕಾರಟಗಿ: ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ತಾಂತ್ರಿಕ ತೊಂದರೆಯಿಂದ 8 ದಿನಗಳಿಂದ ಕಚೇರಿಯ ಕೆಲಸ, ಕಾರ್ಯಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು ದೂರಿದ್ದಾರೆ.

Advertisement

ತಾಲೂಕಿನ ಆರಂಭಗೊಂಡ ಉಪನೋಂದಣಿ ಕಚೇರಿ ಆರಂಭದ ಹಂತದಿಂದಲೂ ವಿವಿಧ ಸಮಸ್ಯೆ ಎದುರಿಸುತ್ತಿದೆ. ಇದರಿಂದಾಗಿ ವಿವಿಧ ಕೆಲಸ ಕಾರ್ಯಗಳಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಕಚೇರಿಗೆ ಆಗಮಿಸಿದ ಸಾರ್ವಜನಿಕರು ತೊಂದರೆ ಅನುಭಿಸುತ್ತಿದ್ದಾರೆ. ಅಲ್ಲದೇ ಕಚೇರಿಯ ತಾಂತ್ರಿಕ ತೊಂದರೆ ಇರುವ ಬಗ್ಗೆಯೂ ಸಾರ್ವಜನಿಕರ ಗಮನಕ್ಕೆ ತರದೇ ನೋಂದಣಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸಾರ್ವಜನಿಕರ ದೂರು.

ಕಚೇರಿಯ ಕೆಲಸ ಕಾರ್ಯ ನಡೆಯದ ಬಗ್ಗೆ ಸಾರ್ವಜನಿಕರಿಗೆ ತಿಳಿಯದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರು ಕಚೇರಿಯ ಮುಂದೆ ಕಾಯುತ್ತ ಕುಳಿತು, ಮರಳಿ ಹೋದ ಘಟನೆಗಳು ನಡೆದಿವೆ.

ಈ ಕುರಿತು ಉಪ ನೋಂದಣಿ ಕಚೇರಿ ಅಧಿಕಾರಿ ಸಂತೋಷ ಮಾತನಾಡಿ, ಸಾಫ್ಟವೇರ್‌ ತೊಂದರೆಯಿಂದ ಕಚೇರಿಯ ಕೆಲಸ ಕಾರ್ಯಗಳು ಕಳೆದ 8 ದಿನಗಳಿಂದ ಸ್ಥಗಿತಗೊಂಡಿವೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕಳೆದ ರವಿವಾರ ಬೆಂಗಳೂರಿಂದ ಎಂಜಿನಿಯರ್‌ರು ಆಗಮಿಸಿ ಸಾಫ್ಟ್‌ವೇರ್‌ ದುರಸ್ತಿ ಕಾರ್ಯ ನಡೆಸಿದ್ದರು. ಆದರೂ ಸಮರ್ಪಕವಾಗಿ ದುರಸ್ತಿಗೊಳ್ಳದ ಮತ್ತೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಇಂದು ಅಥವಾ ನಾಳೆ ದುರಸ್ತಿ ಕಾರ್ಯ ನಡೆಯಲಿದ್ದು, ಇನ್ನೆರಡು ದಿನಗಳಲ್ಲಿ ಕಚೇರಿ ಕೆಲಸಗಳು ಆರಂಭಗೊಳ್ಳುವವು ಎಂದರು.

ಉಪ ನೋಂದಣಿ ಕಚೇರಿಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಕೆಲಸ ಕಾರ್ಯಗಳು ಸ್ಥಗಿತಗೊಂಡ ಬಗ್ಗೆ ಇದುವರೆಗೂ ಸಂಬಂಧಿಸಿದ ಕಚೇರಿಯ ಯಾವೊಬ್ಬ ಅಧಿಕಾರಿ ನನ್ನ ಗಮನಕ್ಕೆ ತಂದಿಲ್ಲ. ಇಂದು ನೀವು ಹೇಳಿದ ನಂತರ ಗೊತ್ತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ದುರಸ್ತಿ ಕಾರ್ಯ ನಡೆಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡುವಂತೆ ಸೂಚಿಸುತ್ತೇನೆ. –ಬಸವರಾಜ ದಢೇಸುಗೂರ, ಶಾಸಕ

Advertisement

ಎಂಟು ದಿನಗಳಿಂದ ಉಪನೋಂದಣಿ ಕಚೇರಿಯಲ್ಲಿ ಸಾಫ್ಟ್‌ವೇರ್‌ ತೊಂದರೆಯಿಂದಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು, ವರ್ತಕರು, ಉದ್ದಿಮೇದಾರರಿಗೆ ತುಂಬಾ ತೊಂದರೆಯಾಗಿದ್ದು, ತಾಂತ್ರಿಕ ತೊಂದರೆಯ ಬಗ್ಗೆ ಜಿಲ್ಲಾ ಡಿ.ಆರ್‌. ಗಮನಕ್ಕೆ ತರಲಾಗಿದೆ ಆದರೆ ಇವರೆಗೂ ಸರಿಪಡಿಸಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು. –ಶಿವರಡ್ಡಿನಾಯಕ, ನ್ಯಾಯವಾದಿ

ಉಪನೋಂದಣಿ ಕಚೇರಿಯಲ್ಲಿ 8 ದಿನಗಳಿಂದ ಯಾಂತ್ರಿಕ ತೊಂದರೆಯಿಂದ ಯಾವ ಕೆಲಸಗಳು ನಡೆಯುತ್ತಿಲ್ಲ. ನಿತ್ಯ ಹಳ್ಳಿಗಳಿಂದ ಬಂದು ಕಾದು ಹೋಗಬೇಕಾಗಿದೆ. ಕಚೇರಿ ಅಧಿ ಕಾರಿಗಳನ್ನು ಕೇಳಿದರೆ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕೆಟ್ಟಿದೆ ಎನ್ನುತ್ತಾರೆ. –ದುರಗಪ್ಪ ಬಡಗಣಿ, ಮರ್ಲಾನಹಳ್ಳಿ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next