Advertisement
ಬಾಗೇಪಲ್ಲಿಯಲ್ಲಿ ಏಪ್ರಿಲ್ 2007ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾಗಿದ್ದು, ಆ ಸಮಯ ದಲ್ಲಿಯೇ ಗುಡಿಬಂಡೆ ತಾಲೂಕಿನಲ್ಲಿ ಉಪಮಾರುಕಟ್ಟೆ ಪ್ರಾರಂಭಿಸಲು ಘೋಷಣೆ ಮಾಡಲಾಗಿತ್ತು ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ.
Related Articles
Advertisement
ಜಾಗ ಗುರುತಿಸಿ ಮಂಜೂರಾತಿಗೆ ಸಲ್ಲಿಕೆ: ಬಾಗೇಪಲ್ಲಿ ಎಪಿಎಂಸಿ ಸಭೆಯಲ್ಲಿ ಮಾ.8.2017ರಂದು ಗುಡಿಬಂಡೆ ತಾಲೂಕಿನ, ಪಲ್ಲೆ„ಗಾರಹಳ್ಳಿ ಗ್ರಾಮದ ಸರ್ವೆ ನಂ. 8/1ಬಿ ನಲ್ಲಿ 14.05 ಎಕರೆ ಜಮೀನು ಮಂಜೂರಾತಿ ತೀರ್ಮಾನಿಸಿ ಅದರಂತೆ ತಹಶೀ ಲ್ದಾರ್‌ಗೆ ಜಮೀನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಸರ್ಕಾರಕ್ಕೆ ಶುಲ್ಕ ಪಾವತಿಸಿದರೆ ಮಂಜೂರು:ಎಪಿಎಂಸಿ ಕೋರಿಕೆಯಂತೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಅವರು ಜಮೀನು ಮಂಜೂರು ಮಾಡಲು ಸರ್ಕಾರ ವಿಧಿಸುವ ಮೊತ್ತ ಪಾವತಿಸಲು, ಕೋರಿಕೆದಾರರು ಒದಗಿಸುವ ಸೌಲಭ್ಯಗಳ ಬಗ್ಗೆ ನೀಲನಕ್ಷೆ, ಯೋಜನಾ ಅಂದಾಜು ಪಟ್ಟಿ ನೀಡುವಂತೆ ಫೆ.27, 2018 ರಂದು ಪತ್ರ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಷರತ್ತುಗಳು ವಿಧಿಸಿದ್ದೇ ತಡ, ಜಮೀನು ಮಂಜೂರಾತಿ ವಿಚಾರ ಅಲ್ಲಿಗೆ ಕೈಬಿಟ್ಟು, ಶಾಸಕರು ಇತರೆ ಮುಖಂಡರು ಪ್ರಸ್ತಾಪಿಸಿದಾಗ ಮಾತ್ರ ಆಗ ಅರ್ಜಿ ಸಲ್ಲಿಸುತ್ತೇವೆ, ಈಗ ಅರ್ಜಿ ಸಲ್ಲಿಸುತ್ತೇವೆ ಎಂದು ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಒಟ್ಟಾರೆ ಬಾಗೇಪಲ್ಲಿ ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ತಾಲೂಕಿನ ರೈತರಿಗೆ ಸ್ಥಳೀಯ ಮಾರುಕಟ್ಟೆ ಪ್ರಾರಂಭವಾಗುವುದು ಗಗನ ಕುಸುಮವಾಗಿದೆ. ಶಾಸಕರು ಮುಂದೆ ಬಂದು ತಾಲೂಕಿನಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಪ್ರಾರಂಭಿಸಲು ಪ್ರಯತ್ನ ಪಡುತ್ತಾರೆಯೇ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ಗುಡಿಬಂಡೆ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸಲು ಜಾಗ ಗುರುತಿಸಲಾಗಿದೆ. ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಶುಲ್ಕವನ್ನು ಪಾವತಿಸಲು ಸಭೆಯಲ್ಲಿ ಚರ್ಚಿಸಿ, ಅತಿ ಜರೂರಾಗಿ ಜಮೀನು ಎಪಿಎಂಸಿಗೆ ವರ್ಗಾಯಿಸಲು ಕ್ರಮಕೈಗೊಳ್ಳುತ್ತೇನೆ.
-ತಿಮ್ಮಾರೆಡ್ಡಿ, ಸರ್ಕಾರಿ ನಾಮನಿರ್ದೇಶಕ
ಸದಸ್ಯ, ಎಪಿಎಂಸಿ. ಗುಡಿಬಂಡೆ ತಾಲೂಕಿನಲ್ಲಿ ಕೃಷಿಯೇ ಪ್ರಮುಖ ಆದಾಯ ಮೂಲವಾಗಿದೆ. ಇಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದೆ, ಬೇರೆಡೆಗೆ ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿ ಇದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಕೂಡಲೇ ಮಾರುಕಟ್ಟೆ ಪ್ರಾರಂಭಿಸಬೇಕು.
-ಎಂ.ಎನ್.ರಾಜಣ್ಣ, ಪ್ರಧಾನ
ಕಾರ್ಯದರ್ಶಿ, ಜೆಡಿಎಸ್ -ನವೀನ್ ಕುಮಾರ್