Advertisement

ಉಪ ಕದನ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

11:28 AM Nov 22, 2019 | Team Udayavani |

ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ ಗ್ರಾಮಸ್ಥರಿಗೆ ಬೆಳೆ ಹಾನಿ ಹಾಗೂ ಮನೆ ಹಾನಿ ಪರಿಹಾರ ಇನ್ನೂವರೆಗೆ ನೀಡಿಲ್ಲವೆಂದು ದೂರಿದ ಅಥಣಿ ವಿಧಾನಸಭಾ ಕ್ಷೇತ್ರದ ಜನವಾಡ ಗ್ರಾಮಸ್ಥರು ಡಿ. 5ರಂದು ನಡೆಯಲಿರುವ ಉಚುನಾವಣೆಯ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

Advertisement

ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಗ್ರಾಮಸ್ಥರು, ಕೆಲ ತಿಂಗಳ ಹಿಂದೆಯಷ್ಟೇ ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿರುವ ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಸ್ತೆ ರಿಪೇರಿ ಹಾಗೂ ಸರ್ವೇ ಮಾಡಿ ಸೇರಿಸಿದ ಮನೆಗಳನ್ನು ಎ, ಬಿ, ಸಿ ಗ್ರೇಡ್‌ ಕ್ಯಾಟಗರಿ ಎಂದು ಕಂಪ್ಯೂಟರ್‌ ಲಾಗಿನ್‌ದಿಂದ ತೆಗೆದು ಹಾಕಲಾಗಿದೆ. ಇನ್ನೂ ಕಂಪ್ಯೂಟರ್‌ದಲ್ಲಿ ಲಾಗಿನ್‌ ಮಾಡದೇ ಇದ್ದ ಸರ್ವೇ ಅರ್ಜಿಗಳು 100ರಿಂದ 200ರವರೆಗೆ ಬಾಕಿ ಉಳಿದುಕೊಂಡಿವೆ ಎಂದು ಆರೋಪಿಸಿದರು.

ಈ ಎಲ್ಲ ಸರ್ವೇ ಮಾಡಿದ ಮನೆಗಳು ಹಾಗೂ ಕಂಪ್ಯೂಟರ್‌ದಿಂದ ತೆಗೆದು ಹಾಕಿದ ಮನೆಗಳು ಸೇರ್ಪಡೆ ಆಗದೇ ಇದ್ದಿದ್ದರಿಂದ ಸರ್ಕಾರಿ ಮೂಲ ಸೌಕರ್ಯಗಳು ನೀಡಿಲ್ಲ. ಮುಳುಗಡೆ ಗ್ರಾಮ ಎಂದು ಹೇಳುತ್ತ ಸುಮಾರು 15 ವರ್ಷಗಳಿಂದ ಜಿಲ್ಲಾಡಳಿತ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ ಎಂದು ದೂರಿದರು. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷದಿಂದ ಗ್ರಾಮಸ್ಥರು ಅನೇಕ ಸೌಕರ್ಯಗಳಿಂದ ವಂಚಿತಗೊಂಡಿದ್ದಾರೆ.

ಹೀಗಾಗಿ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರೆಲ್ಲರೂ ಡಿ. 5ರಂದು ನಡೆಯಲಿರುವ ಉಪಚುನಾವಣೆ ಮತದಾನ ಬಹಿಷ್ಕರಿಸಲಿದ್ದೇವೆ. ಜತೆಗೆ ಬೇಡಿಕೆ ಈಡೇರದಿದ್ದರೆ ನಿರಂತರ ಧರಣಿ ಹಾಗೂ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಬಿಲಾಲಗೌಡ ಪಾಟೀಲ, ಗುರಬಸು ಕಾಂಬಳೆ, ಗುರುಪಾದ ಪಾಟೀಲ, ದರಬಾರ ಮಕಾನದಾರ, ಗುರುಪಾದ ಚಾಮಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next