Advertisement
ಲೋಟಸ್ ಕಟೌಟ್ ಬ್ಯಾಕ್‌ನೆಕ್ ಬ್ಲೌಸ್ಹೈನೆಕ್ ಬ್ಲೌಸುಗಳೇ ಆಗಿದ್ದರೂ ಹಿಂಭಾಗದಲ್ಲಿ ಕಮಲದ ಪಕಳೆಗಳಂತಹ ಆಕಾರದಲ್ಲಿ ಕಟೌಟನ್ನು ಮಾಡಲಾಗಿರುತ್ತದೆ. ಬಹಳ ಸುಂದರವಾದ ಮತ್ತು ಹೊಸ ಬಗೆಯ ಬ್ಯಾಕ್ ಡಿಸೈನುಗಳಿವಾಗಿವೆ. ಗ್ರ್ಯಾಂಡ್ ಇರುವ ಬ್ಲೌಸ್ ಪೀಸುಗಳಿಗೆ ಈ ಬಗೆಯ ಡಿಸೈನುಗಳು ಬಹಳ ಚೆನ್ನಾಗಿ ಕಾಣುತ್ತವೆ.
ಹೈನೆಕ್ಡ್ ಬ್ಲೌಸುಗಳಿವಾಗಿದ್ದು ಹಿಂಭಾಗದಲ್ಲಿ ಡೈಮಂಡ್ ಕಟೌಟ್ ಇರುತ್ತದೆ. ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹುಕ್ ಎನ್‌ಕ್ಲೋಷರ್ ಇರುತ್ತವೆ. ಡೈಮಂಡಿನ ದಿನಗಳಲ್ಲಿ ಹೂಗಳ ಲೇಸುಗಳು ಬಂದರಂತೂ ಬ್ಲೌಸಿನ ಬ್ಯಾಕ್ ಡಿಸೈನಿನ ಮೆರುಗು ಇಮ್ಮಡಿಗೊಳ್ಳುತ್ತದೆ. ಇವುಗಳೊಂದಿಗೆ ಥ್ರಿ ಫೋರ್ತ್ ಸ್ಲಿವುಗಳು ಬಹಳ ಸುಂದರವಾಗಿ ಒಪ್ಪುತ್ತವೆ. ಮಟ್ಕಾ ಕಟ್ ಬ್ಲೌಸ್
ಗಡಿಗೆಯಂತಹ ಆಕಾರವನ್ನು ಹೋಲುವ ಬ್ಯಾಕ್ ಡಿಸೈನುಗಳಿವಾಗಿದ್ದು ಮೇಲ್ಭಾಗದಲ್ಲಿ ಒಂದು ಪಟ್ಟಿ ಬಂದಿದ್ದು ಕೆಳಗೆ ಮಟ್ಕಾದ ಆಕಾರದ ಓಪನಿಂಗ್ ಇರುತ್ತವೆ. ಫ್ಯಾನ್ಸಿ ಸೀರೆಗಳೊಂದಿಗೆ ಈ ಬಗೆಯ ಬ್ಲೌಸುಗಳು ಬಹಳ ಚೆನ್ನಾಗಿ ಒಪ್ಪುತ್ತವೆ. ಎಂಬ್ರಾಯಿಡರಿ ಪಟ್ಟಿಗಳು ಬಂದಾಗ ಈ ಬಗೆಯ ಬ್ಯಾಕ್ ಡಿಸೈನಿನ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.
Related Articles
ಬ್ಲೌಸಿನ ಬ್ಯಾಕ್ ಪೂರ್ತಿಯಾಗಿ ಚಿಕ್ಕ ಚಿಕ್ಕ ಕನ್ನಡಿಗಳಿಂದ ಅಲಂಕೃತವಾಗಿರುತ್ತವೆ. ಇವುಗಳು ಪ್ಲೆ„ನ್ ಶಿಫಾನ್ ಸೀರೆಗಳೊಂದಿಗೆ ಬಹಳ ಚೆನ್ನಾಗಿ ಕಾಣುತ್ತವೆ. ಕೆಲವೊಮ್ಮೆ ಪ್ಲೆ„ನ್ ಸೀರೆಗಳೊಂದಿಗೆ ಕಾಂಟ್ರಾಸ್ಟ್ ಬಣ್ಣದ ಬ್ಲೌಸ್ ಪೀಸು ಬಂದಿದ್ದು ಮಿರರುಗಳನ್ನು ಬಳಸಿಕೊಂಡು ಬ್ಲೌಸಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಕ್ಯಾಷುವಲ್ ಸಂದರ್ಭಗಳಲ್ಲಿ ಈ ಬಗೆಯ ಸೀರೆಗಳು ಮತ್ತು ಬ್ಲೌಸುಗಳು ಉತ್ತಮವಾದ ಆಯ್ಕೆಯಾಗಿದ್ದು ನಿಮ್ಮನ್ನು ಸ್ಟೈಲಿಶ್ ಆಗಿಯೂ ಮಾಡುತ್ತವೆ.
Advertisement
ಕ್ಲೋಸ್ಡ್ ಬ್ಯಾಕ್ ಕಟ್ ವರ್ಕ್ ಬ್ಲೌಸ್ಇವುಗಳು ಕ್ಲೋಸ್ಡ್ ಬ್ಯಾಕ್ ಡಿಸೈನಾಗಿದ್ದು ಕಟ… ವರ್ಕ್ ಬ್ಲೌಸ್ ಮಾದರಿಗಳಿವು. ಅನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಕಟೌಟ್ ಅನ್ನು ಹೊಂದಿರುವ ಇವುಗಳು ಸ್ಟೈಲಿಶ್ ಆಗಿಯೂ ಕಾಣುವಂತಹ ಬ್ಲೌಸುಗಳಿವಾಗಿವೆ. ಸಾಮಾನ್ಯವಾಗಿ ಹೈಬೋಟ… ನೆಕ್ ಅನ್ನು ಹೊಂದಿರುವ ಈ ಬಗೆಯ ಬ್ಲೌಸ್ ಡಿಸೈನುಗಳು ಟ್ರೆಂಡಿ ಮಾದರಿಯಾಗಿದೆ. ಶೀರ್ ಬ್ಯಾಕ್ ಕಟ್ ವರ್ಕ್ ಬ್ಲೌಸ್
ಇವುಗಳೂ ಮೇಲಿನ ಬಗೆಯಂತೆ ಕಟೌಟ್ ಬ್ಲೌಸಾಗಿದ್ದರೂ ಅರ್ಧ ಭಾಗ ನೆಟ್ ಬಟ್ಟೆಯಿಂದ ಮತ್ತು ಉಳಿದರ್ಧ ಕಟೌಟ್ ಮಾದರಿಯಿಂದ ತಯಾರಿಸಲಾಗಿರುತ್ತದೆ. ಇವುಗಳೂ ಕೂಡ ಬಹಳ ಟ್ರೆಂಡಿ ಬಗೆಯ ಬ್ಲೌಸುಗಳಾಗಿದ್ದು ಇವುಗಳನ್ನು ಧರಿಸಿದಾಗ ತುರುಬುಗಳನ್ನು ಹಾಕಿಕೊಳ್ಳುವುದರ ಮೂಲಕ ಬ್ಯಾಕ್ ಡಿಸೈನನ್ನು ಹೈಲೈಟ್ ಮಾಡಿಕೊಳ್ಳಬಹುದು. ಡಬಲ್ ಲೀಫ್ ಕಟೌಟ್ ಬ್ಯಾಕ್‌ನೆಕ್ ಬ್ಲೌಸ್
ಹೆಸರಿಗೆ ತಕ್ಕಂತೆ ಮಧ್ಯದಲ್ಲಿ ಪಟ್ಟಿ ಬಂದಿದ್ದು ಪಟ್ಟಿಯ ಇಕ್ಕೆಲಗಳಲ್ಲಿ ಎರಡು ಲೀಫ್ (ಎಲೆಗಳ) ಆಕೃತಿಯ ಕಟೌಟ್ ಇರುತ್ತವೆ. ಇವುಗಳೂ ಕೂಡ ಹೈನೆಕ್ ಬ್ಲೌಸುಗಳೇ ಆಗಿರುತ್ತವೆ. ಕಾಟನ್, ಫ್ಯಾನ್ಸಿ ಬಗೆಯ ಸೀರೆಗಳಿಗಳೊಂದಿಗೆ ಒಪ್ಪುವಂತಹ ಡಿಸೈನಿದಾಗಿದೆ. ಹಾಫ್ ಶೋಲ್ಡರ್ (ಕಟೌಟ…) ಬ್ಯಾಕ್‌ನೆಕ್ ಬ್ಲೌಸ್
ಮುಂದೆ ಮತ್ತು ಹಿಂದೆಯೂ ಕೂಡ ಹಾಫ್ ಶೋಲ್ಡರ್ ಅನ್ನು ಹೊಂದಿರುವ ಮಾದರಿಯಾಗಿದೆ. ಮಾಡರ್ನ್ ಲುಕ್ಕನ್ನು ಕೊಡುವ ಇವುಗಳು ಬಹಳ ಸ್ಟೈಲಿಶ್ ಆಗಿರುವ ಬ್ಲೌಸ್ ಡಿಸೈನುಗಳಾಗಿವೆ. ಪ್ರಭಾ ಭಟ್