Advertisement

ಒಂದು ಕಾಲು ಹರ್ಯಾಣದಲ್ಲಿದೆ, ಮತ್ತೊಂದು..: ಆಸೀಸ್ ಆಟಗಾರನ ಕೆಣಕಿದ ಶ್ರೇಯಸ್ ಅಯ್ಯರ್

02:29 PM Mar 04, 2023 | Team Udayavani |

ಇಂದೋರ್: ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವು ಎರಡೂವರೆ ದಿನದಲ್ಲಿ ಅಂತ್ಯವಾಗಿದೆ. ಸತತ ಎರಡು ಸೋಲುಗಳ ಬಳಿಕ ತಿರುಗೇಟು ನೀಡಿದ ಆಸ್ಟ್ರೇಲಿಯಾ ತಂಡವು 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ.

Advertisement

ಗೆಲುವಿಗೆ 76 ರನ್ ಗಳ ಸುಲಭ ಗುರಿ ಪಡೆದಿದ್ದ ಆಸೀಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಅವರು ತಂಡವನ್ನು ಜಯದತ್ತ ಮುನ್ನಡೆಸಿದರು. ಅದರಲ್ಲೂ ವೇಗವಾಗಿ ಬ್ಯಾಟ್ ಬೀಸಿದ ಹೆಡ್ ಅಜೇಯ 49 ರನ್ ಗಳಿಸಿದರು.

ಇದನ್ನೂ ಓದಿ:ಚಂದನವನಕ್ಕೆ WWE ಖ್ಯಾತಿಯ ದಿ ಗ್ರೇಟ್ ಖಲಿ ಎಂಟ್ರಿ – ‘ಕೆಂಡದ ಸೆರಗು’ಚಿತ್ರದಲ್ಲಿ ನಟನೆ

ಆಸೀಸ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಟ್ರಾವಿಸ್ ಹೆಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಟೀಂ ಇಂಡಿಯಾದ ಆಟಗಾರ ಶ್ರೇಯಸ್ ಅಯ್ಯರ್ ಅವರು ತಮಾಷೆ ಮಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಟ್ರಾವಿಸ್ ಹೆಡ್ ಅವರು ನಿಂತಿರುವ ಶೈಲಿಗೆ ಅಣಕವಾಡಿದ ಅಯ್ಯರ್, ‘ಅವನ ಒಂದು ಕಾಲು ಚಂಡೀಗಢದಲ್ಲಿದೆ, ಇನ್ನೊಂದು ಹರ್ಯಾಣದಲ್ಲಿದೆ’ ಎಂದರು. ಇದು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next