Advertisement

ರಾಜ್ಯ ವಿಧಾನಮಂಡಲದ‌‌ ಇನ್ನೊಂದು ಸಮಿತಿಯಿಂದ ಅಧ್ಯಯನ ಪ್ರವಾಸ

10:23 PM Jul 04, 2022 | Team Udayavani |

ಬೆಂಗಳೂರು : ರಾಜ್ಯ ವಿಧಾನಮಂಡಲದ‌‌ ಇನ್ನೊಂದು ಸಮಿತಿ ಈಗ ಅಧ್ಯಯನ ಪ್ರವಾಸಕ್ಕೆ ಸಿದ್ದವಾಗಿದೆ.ಸೋಮಶೇಖರ್ ರೆಡ್ಡಿ ಅಧ್ಯಕ್ಷತೆಯ ವಿಧಾನ ಮಂಡಲದ ಉಭಯ ಸದನಗಳ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತ್ ರಾಜ್ ಸಂಸ್ಥೆಗಳ‌ ಸಮಿತಿ ಜುಲೈ 5 ರಿಂದ 8 ರವರೆಗೆ ದಿಲ್ಲಿ ಹಾಗೂ ಗುಜರಾತ್ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

Advertisement

ನಾಳೆ ಬೆಳಗ್ಗೆ ಎಂಟು ಗಂಟೆಗೆ ಈ ಸಮಿತಿಯ ಪ್ರವಾಸ ಆರಂಭವಾಗುತ್ತದೆ.‌ಸದಸ್ಯರಾದ ಸಿ.ಎಸ್.ಪುಟ್ಟರಾಜು, ಡಾ.ಅಂಜಲಿ ನಿಂಬಾಳ್ಕರ್, ಶರಣು ಸಲಗಾರ್, ಅರುಣ್ ಕುಮಾರ್ ಗುತ್ತೂರು, ಕೆ.ವಿ.ನಂಜೇಗೌಡ, ಆರ್.ಶಂಕರ್, ಸಿ.ಎಂ.ಲಿಂಗಪ್ಪ, ಎನ್.ರವಿಕುಮಾರ್, ಎಂ.ಎಲ್.ಅನಿಲ್ ಕುಮಾರ್, ಟಿ.ನಾರಾಯಣಸ್ವಾಮಿ ಈ ತಂಡದಲ್ಲಿ ಇದ್ದಾರೆ.

ಈ ಪೈಕಿ ಕೆಲ ಶಾಸಕರು ತಮ್ಮ‌ ಪತ್ನಿ  ಹಾಗೂ ಮಕ್ಕಳನ್ನೂ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ‌. ಕಳೆದ ವಾರ ಇನ್ನೊಂದು ಸಮಿತಿ ಸದಸ್ಯರು ಲೇಹ್ ಲಡಾಕ್ ಪ್ರವಾಸಕ್ಕೆ ಕುಟುಂಬ ಸಮೇತ ಪ್ರವಾಸ ತೆರಳಿದ್ದರು.ಇದು ಈ ಸಮಿತಿಯ ಅಂತಿಮ ಅಧ್ಯಯನ ಪ್ರವಾಸವಾಗಿದ್ದು, ಆ ಬಳಿಕ ವರದಿ ಸಲ್ಲಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next