Advertisement
ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶವು ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ದೇಶವಾಗಿದ್ದು ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆ ಅನನ್ಯ ಎಂದು ಬಣ್ಣಿಸಿದರು.
Related Articles
Advertisement
ಸಾಧಕರಿಗೆ ಸನ್ಮಾನ : ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆಗೈದ ಎಂ.ಗಿರೀಶ್ (ಪರಿಸರ) ಎಚ್.ವಿ. ಮಾದೇಗೌಡ (ವಿಕಲಚೇತನ) ಬಸವರಾಜು (ಸಮಾಜಸೇವೆ), ಶೋಭಾರಾಣಿ (ಶಿಕ್ಷಣ) ವಿ.ಕೆ. ಜಯರಾಮು (ಸಾಮಾಜಿಕ ಸೇವೆ) ಎಸ್. ಪರಮೇಶ್ವರಯ್ಯ (ವೀರಗಾಸೆ) ಜಿ.ಕೆವೀರಪ್ಪ (ರಂಗಭೂಮಿ) ಗೌರಮ್ಮ(ಪೌರಕಾರ್ಮಿಕರು) ಎಚ್.ಟಿ. ಶೇಖರ್(ತೋಟಗಾರಿಕೆ) ಟಿ.ಕೆ. ಸತೀಶ್(ಕೃಷಿ) ಎಚ್.ಬಿ. ಗಂಗಾಧರ್(ರೇಷ್ಮೆ) ರಾಮಲಿಂಗೇಗೌಡ(ಕೃಷಿ) ತಿಮ್ಮಪ್ಪ(ರಂಗಭೂಮಿ) ನಿಂಗೇಗೌಡ (ಪರಿಸರ) ಪಿ. ನಂದೀಶ (ಪತ್ರಿಕೋದ್ಯಮ)ರನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ತಾಲೂಕಿನ ಕೊಕ್ಕರೆ ಬೆಳ್ಳೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಲಾಯಿತು.
ಮೆರವಣಿಗೆ: ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದ ಆವರಣದಿಂದ ಅಲಂಕೃತ ಭಾರತಾಂಬೆ ಚಿತ್ರಪಟದ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನ, ವಾದ್ಯವೃಂದಗಳ ಜತೆ ಪೇಟೇಬೀದಿಯ ಮೂಲಕ ಸಂಚರಿಸಿ ಕ್ರೀಡಾಂಗಣ ತಲುಪಿದವು.
ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಬಿ.ಎಂ. ರಘು, ಬಿಇಒ ರೇಣುಕಮ್ಮ, ಪುರಸಭೆ ಮುಖ್ಯಾಧಿಕಾರಿ ಮಹೇಶ್, ತಾಪಂ ಇಒ ಎಚ್.ಕೆ. ಮಣಿಕಂಠ, ವೃತ್ತ ನಿರೀಕ್ಷಕ ಮಹೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಸಿದ್ದೇಗೌಡ, ಮುಖಂಡ ಮಹದೇವು, ವೆಂಕಟಾಚಲಯ್ಯ, ಹಿರಿಯ ದೈಹಿಕ ಶಿಕ್ಷಕ ಶ್ರೀಕಂಠಯ್ಯ ಇದ್ದರು.
ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ವರದಿ: ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಶಾಲೆಯ ಅಧ್ಯಕ್ಷ ಶಿವನಂಜಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ತ್ಯಾಗ, ಬಲಿದಾನವನ್ನು ತಿಳಿದುಕೊಂಡು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಮಹತ್ಮರ ಆದರ್ಶ ಮೈಗೂಡಿಸಿಕೊಳ್ಳಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬದಲು ಗಾಂಧೀಜಿ, ಸುಭಾಷ್‌ಚಂದ್ರಬೋಸ್, ಸ್ವಾಮಿ ವಿವೇಕರಂತಹ ಮಹಾನೀಯರ ಪುಸ್ತಕಗಳನ್ನು ಓದುವ ಮೂಲಕ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಚಂದ್ರನಾಯಕ್, ಸಿಇಒ ಎಂ.ಎಸ್.ಸಂತೋಷ್‌ಗೌಡ, ನಿರ್ದೇಶಕಿ ಬಿ.ಸಿ.ಸರ್ವಮಂಗಳ, ಕಲ್ಪಿತಾ, ಸಾಮ್ರಾಟ್, ಆಡಳಿತಾಧಿಕಾರಿ ಗೋವಿಂದಶೆಟ್ಟಿ, ಮುಖ್ಯಶಿಕ್ಷಕಿ ಪಾವನಾ, ಶಿಕ್ಷಕರಾದ ಮೀನಾ, ಚೇತನ, ಸುನಂದ, ಗೀತಾ, ಕುಮಾರ್, ಸ್ವಪ್ನ, ತಾಸೀನ್‌ತಾಜ್, ಜೀವಜ್ಯೋತಿ, ಸುಮಯ್ಯ, ಮಾನಸ, ಸುನೀತ, ಪಲ್ಲವಿ ಇತರರು ಇದ್ದರು.