ವೇಣೂರು: ವಿದ್ಯಾರ್ಥಿಗಳು ಎಂದೂ ಕುತೂಹಲ ಮತ್ತು ಆಸಕ್ತಿಯನ್ನು ಕಳೆದುಕೊಳ್ಳಬಾರದು. ಪ್ರತಿಯೊಂದು ವಿಷಯದಲ್ಲಿ ಕುತೂಹಲ ಬೆಳೆಸಿಕೊಳ್ಳಬೇಕು. ಅದು ಹೊಸ ಸಂಶೋಧನೆಗೆ ನಾಂದಿ ಆಗುತ್ತದೆ. ಅಧ್ಯಯನ ನಿಂತ ನೀರಾಗದೆ ನಿರಂತರ ಅಧ್ಯಯನಶೀಲರಾಗಿರಬೇಕು ಎಂದು ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ. ಯಶೋವರ್ಮ ಹೇಳಿದರು.
Advertisement
ಅವರು ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಇಂಗ್ಲಿಷ್ ಕಲಿಕಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶಂಕರನಾರಾಯಣ ಇತ್ತೀಚಿನ ದಿನಗಳಲ್ಲಿನ ಇಂಗ್ಲಿಷ್ ಭಾಷೆಯ ಮಹತ್ವದ ಬಗ್ಗೆ ವಿವರಿಸಿದ ಅವರು ಈ ಶಾಲೆಯನ್ನು ದತ್ತುಪಡೆದುಕೊಂಡು ವಾರದಲ್ಲಿ 2 ದಿನ ಇಂಗ್ಲಿಷ್ ಕಲಿಕಾ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು. ಶಾಲಾ ಪರಿಸರ ಸಂಘದ ವತಿಯಿಂದ ಬಾಲ್‌ಪೆನ್ ತ್ಯಜಿಸಿ ಶಾಯಿ ಪೆನ್ ಬಳಸಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಬದ್ಯಾರು ಹಂಸಗಿರಿ ಆಗ್ರೋ ಇಂಡಸ್ಟ್ರೀಸ್‌ನ ಮಾಲಕ ಬಾಲಕೃಷ್ಣ ನಾಯಕ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಾಯಿ ಪೆನ್ ಕೊಡುಗೆಯಾಗಿ ನೀಡಿದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ವಿದ್ಯೆಯ ಮಹತ್ವದ ಬಗ್ಗೆ ವಿವರಿಸಿದರು.
Related Articles
ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕ ಶೇಖರ ಶಂಬು ವಂದಿಸಿದರು.
Advertisement
ಶಿಕ್ಷಕಿಯರಾದ ಚೈತ್ರಾ ಆರ್. ರಾವ್, ನಿರುಪಮಾ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಲಾ ಪಿ. ಕಾರ್ಯಕ್ರಮ ನಿರ್ವಹಿಸಿದರು.