Advertisement
ಕಾಲೇಜಿನ ಹೊರ ಭಾಗದಲ್ಲಿ ನೂರಾರು ವಿದ್ಯಾರ್ಥಿಗಳ ಗುಂಪು ಸೇರಿದ್ದು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುತ್ತಾ ಕಾಲೇಜು ಆವರಣ ಪ್ರವೇಶಿಸಲು ಮುಂದಾದಾಗ ಪೊಲೀಸರು ವಿದ್ಯಾರ್ಥಿಗಳನ್ನು ತಡೆದಿದ್ದಾರೆ ಅಲ್ಲದೆ ಪೊಲೀಸರು ವಿದ್ಯಾರ್ಥಿಗಳ ನಡುವೆ ನೂಕುನುಗ್ಗಲು ನಡೆದಿದ್ದು ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ವಿವೇಕಾನಂದ ಸಿಂಗ್ ‘ಮಸೀದಿ ನಿರ್ಮಿಸಿರುವ ಜಾಗ ವಕ್ಫ್ ಗೆ ಸೇರದಿದ್ದರೆ ಅದನ್ನು ಕಾಲೇಜು ಆವರಣದಿಂದ ಹೊರಕ್ಕೆ ಹಾಕುವಂತೆ ಆಗ್ರಹಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ವಿವೇಕಾನಂದ ಸಿಂಗ್ ಒಂದು ವೇಳೆ ಮಸೀದಿಯಲ್ಲಿ ನಮಾಜ್ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಾದ ನಾವು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದಾರೆ.
Related Articles
ಸ್ಥಳದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಜೊತೆಗೆ ಕಾಲೇಜು ಆವರಣಕ್ಕೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದ್ದು ವಿದ್ಯಾರ್ಥಿಗಳು ಕಾಲೇಜು ಆವರಣ ಪ್ರವೇಶಿಸಬೇಕಾದರೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ ಎಂದು ಎಸಿಪಿ ವಿದುಷ್ ಸಕ್ಸೇನಾ ಹೇಳಿದ್ದಾರೆ.
Advertisement
ಮಸೀದಿ ಸಮಿತಿಯ ಹೇಳೋದೇನುಮಸೀದಿಯ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿಸುವಂತೆ ಈ ಹಿಂದೆ ಉತ್ತರ ಪ್ರದೇಶ ವಕ್ಫ್ ಮಂಡಳಿಗೆ ಪತ್ರ ಬರೆದಿರುವುದಾಗಿ ಮಸೀದಿ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಯಾಸಿನ್ ಹೇಳಿದ್ದಾರೆ. “ಮಸೀದಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ 2018 ರ ನೋಟಿಸ್ ಅನ್ನು ಜನವರಿ 18, 2021 ರಂದು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ವಕ್ಫ್ ಮಂಡಳಿ ತಿಳಿಸಿದೆ. ಈಗ ನಡೆಯುತ್ತಿರುವ ವಿವಾದಕ್ಕೆ ಯಾವುದೇ ಕಾರಣವಿಲ್ಲ” ಎಂದು ಯಾಸಿನ್ ಹೇಳಿಕೊಂಡಿದ್ದಾರೆ.