Advertisement

ಹಿಜಾಬ್‌ಗ ಅವಕಾಶ ನಿರಾಕರಣೆ : ವಿದ್ಯಾರ್ಥಿನಿಯರಿಂದ ಪ್ರತಿಭಟನೆ

02:22 PM Feb 20, 2022 | Team Udayavani |

ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ 3-4 ದಿನಗಳಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ವಿಷಯಕ್ಕೆ ಸಣ್ಣದಾಗಿ ಸಂಘರ್ಷ ಆರಂಭವಾಗಿದ್ದು, ಪೋಷಕರು, ಪ್ರಾಚಾರ್ಯರು, ಉಪನ್ಯಾಸಕರ ಮಾತಿಗೆ ಒಪ್ಪಿದ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿ ಮತ್ತು ಪರೀಕ್ಷೆಗಳಿಗೆ ಹಾಜರಾಗಿದ್ದರು. ಆದರೆ ಶನಿವಾರ ಕಾಲೇಜಿಗೆ ಹಿಜಾಬ್‌ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement

ವಿದ್ಯಾರ್ಥಿನಿಯರಿಗೆ ಹಿಜಾಬ್‌ ತೆಗೆದು ತರಗತಿಗಳಿಗೆ ಹಾಜರಾಗುವಂತೆ ತಿಳಿಹೇಳಿದಾಗ, ಕೆಲವರು ಇದನ್ನು ವಿರೋಧಿಸಿ ಯಾವುದೇ ಕಾರಣಕ್ಕೂ ಹಿಜಾಬ್‌ ತೆಗೆಯುವದಿಲ್ಲ. ಅದು ನಮ್ಮ ಹಕ್ಕು. ನಮಗೆ ತರಗತಿಗಳಿಗೆ ಅವಕಾಶ ನೀಡಿ. ಇಲ್ಲದಿದ್ದಲ್ಲಿ ಯಾರಿಗೂ ತರಗತಿ ನಡೆಸುವುದು  ಬೇಡ ಎಂದು ತಕರಾರು ತೆಗೆದರು. ಈ ವೇಳೆ ಆಗಮಿಸಿದ ವಿದ್ಯಾರ್ಥಿನಿಯರ ಪಾಲಕರಿಗೆ ಪ್ರಾಚಾರ್ಯರು ಮತ್ತು ಉಪನ್ಯಾಸಕರೆಲ್ಲರೂ ತಿಳಿಹೇಳುವ ಕಾರ್ಯ ಮಾಡಿದರು. ಕಾಲೇಜಿನಲ್ಲಿ ಸುಮಾರು 49 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದರು. ಅದರಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿನ ಒಟ್ಟು 38 ವಿದ್ಯಾರ್ಥಿನಿಯರು ಪಾಲಕರ ಮತ್ತು ಉಪನ್ಯಾಸಕರ ಮಾತಿಗೆ ಮನ್ನಣೆ ನೀಡಿ ತರಗತಿಗಳಿಗೆ ಹಿಜಾಬ್‌ ತೆಗೆದು ಹಾಜರಾದರು. ಆದರೆ 11 ವಿದ್ಯಾರ್ಥಿನಿಯರು ಮಾತ್ರ ಯಾರ ಮಾತೂ ಕೇಳುವುದಿಲ್ಲ. ಹಿಜಾಬ್‌ ಧರಿಸಿಯೇ ಹಾಜರಾಗುತ್ತೇವೆ. ನಮ್ಮ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಬೇಡಿ ಎಂದು ಪ್ರತಿಭಟನೆ ನಡೆಸಿದರು.

ಈ ವೇಳೆ ಯಾರ ಮಾತಿಗೂ ಮನ್ನಣೆ ದೊರಕದ ಹಿನ್ನೆಲೆಯಲ್ಲಿ ಪಿಎಸ್‌ಐ ಕಾಲೇಜು ಆವರಣದಲ್ಲಿ 144 ಕಲಂ ಇರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿದರು. ಆಗ ವಿದ್ಯಾರ್ಥಿನಿಯರು ಹಾಗೂ ಕೆಲವರು ರಸ್ತೆಗಿಳಿದು ಕಾಲೇಜು ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತೆರಳಿದರು.

ಸೋಮವಾರದಿಂದ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವುದಾಗಿ ಪೊಲೀಸರು ತಿಳಿಸಿದರು.

ಇದನ್ನೂ ಓದಿ : ಪಂಜಾಬ್‌ ವಿಧಾನಸಭಾ ಚುನಾವಣೆ : ಸೋನು ಸೂದ್ ಕಾರು ಜಪ್ತಿ, ಮನೆಗೆ ವಾಪಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next