ಮೂಡುಬಿದಿರೆ: ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಭಾರತ್ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಭಿನಯಾ ಶೆಟ್ಟಿ ಹೈಜಂಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದು, ತರಬೇತುದಾರ ವಸಂತ ಜೋಗಿ, ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹಾಗೂ ಹೆತ್ತವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಉದಯವಾಣಿ ಜತೆಗೆ ಮಾತನಾಡಿದ ಅವರು, “ಬಹಳ ಖುಷಿ ಆಗುತ್ತಿದೆ. ಇನ್ನಷ್ಟು ಸಾಧನೆ ಮಾಡುವ ಆಸೆ ಇದೆ. ಸರಕಾರ ಒಳ್ಳೆಯ ಸ್ಕಾಲರ್‌ಶಿಪ್ ನೀಡುವುದೆಂದು ಕೇಳಿದ್ದೇವೆ’ ಎಂದು ಹೇಳಿದರು.
ದ್ವಿತೀಯ ಬಿ.ಕಾಂ. ಓದುತ್ತಿರುವ ಕಾರ್ಕಳ ಮೂಲದ ಅಭಿನಯಾ ಹೈಜಂಪ್‌ನಲ್ಲಿ 1.79 ಮೀ. ಜಿಗಿಯುವ ಮೂಲಕ ಚಿನ್ನ, ಪ್ರಥಮ ಬಿ.ಕಾಂ.ನ ಚಿಕ್ಕಮಗಳೂರಿನ ಸುಪ್ರಿಯಾ ಅಷ್ಟೇ ಎತ್ತರ ಜಿಗಿದು (ಫೌಲ್‌ಗಳನ್ನು ಪರಿಗಣಿಸಿ) ಬೆಳ್ಳಿ ಪದಕ ಗಳಿಸಿದ್ದಾರೆ.
67 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಭವಿಷ್ಯಾ ಪೂಜಾರಿ ಬೆಳ್ಳಿ ಪದಕ ಗಳಿಸಿದ್ದಾರೆ. 109 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿಶಾಂತ್ ಕಂಚು, ಲಾವಣ್ಯಾ ರೈ ರವಿವಾರ ನಡೆದ 71 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಾರೆ. ರೆಸ್ಲಿಂಗ್‌ನಲ್ಲಿ ಲಕ್ಷ್ಮೀ ರೆಡೇಕರ್ ಕಂಚಿನ ಪದಕ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದು ಅವರ ಎಂಟನೇ ಪದಕ. ರೆಸ್ಲಿಂಗ್ ವಿಭಾಗದಲ್ಲಿ ಬೆಳಗಾವಿ ರಜತ ಪದಕ ಗಳಿಸಿದೆ.