Advertisement

ವಿದ್ಯಾರ್ಥಿಗಳ ಉಪಗ್ರಹ ಉಡಾವಣೆ

12:30 AM Jan 24, 2019 | Team Udayavani |

ಹೊಸದಿಲ್ಲಿ: ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಉಪಗ್ರಹವನ್ನು ಇದೇ ಮೊದಲ ಬಾರಿಗೆ ಗುರುವಾರ ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. ಇದು 2019ರ ಇಸ್ರೋದ ಮೊದಲ ಬಾಹ್ಯಾಕಾಶ ಯೋಜನೆ ಕೂಡ ಆಗಿದೆ. ಸ್ಪೇಸ್‌ಕಿಡ್ಸ್‌ ಇಂಡಿಯಾ ವಿದ್ಯಾರ್ಥಿಗಳು ಡಿಆರ್‌ಡಿಒಗಾಗಿ ಮೈಕ್ರೊಸ್ಯಾಟ್‌-ಆರ್‌ ಮತ್ತು ಪುಟ್ಟ ಸಂವಹನ ಉಪಗ್ರಹ ಕಲಾಮ್‌ಸ್ಯಾಟ್‌ ಗುರುವಾರ ಶ್ರೀಹರಿಕೋಟದ ಸತೀಶ್‌ ಧವನ್‌ ಉಡಾವಣಾ ನೆಲೆಯಿಂದ ರಾತ್ರಿ 11.49 ಕ್ಕೆ ಉಡಾವಣೆ ಆಗಲಿವೆ. ಪಿಎಸ್‌ಎಲ್‌ವಿ ಸಿ44 ಈ ಉಪಗ್ರಹಗಳನ್ನು ಹೊತ್ತೂಯ್ಯಲಿದೆ. ಉಪಗ್ರಹ ವನ್ನು ಮೊದಲ ಬಾರಿಗೆ ಅಲ್ಯುಮಿನಿಯಮ್‌ ಟ್ಯಾಂಕ್‌ ಬಳಸಿ ತಯಾರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ  ಕೆ. ಸಿವನ್‌ ಹೇಳಿದ್ದಾರೆ.

Advertisement

ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೆಸರಿನ ಕಲಾಂಸ್ಯಾಟ್‌ ಸಂವಹನ ಉಪಗ್ರಹ 2 ವರ್ಷಗಳ ಜೀವಿತಾವಧಿ ಹೊಂದಿದ್ದು, ಇದು 12 ಲಕ್ಷ ವೆಚ್ಚದಲ್ಲಿ ತಯಾರಾಗಿದೆ. ಇದನ್ನು ತಮಿಳುನಾಡಿನ ಪಾಳಪಟ್ಟಿಯ ವಿದ್ಯಾರ್ಥಿ ರಿಫಾತ್‌ ಶಾರೂಕ್‌ನೇತೃತ್ವದಲ್ಲಿ ಪೌಢಶಾಲೆ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಜೊತೆಗೆ ಇದು, ಜಗತ್ತಿನ ಅತಿ ಕಡಿಮೆ ತೂಕದ, ಪ್ರಪ್ರಥಮ ಥ್ರಿಡಿ ಪ್ರಿಂಟ್‌ ತಂತ್ರಜ್ಞಾನದ ಉಪಗ್ರಹ ಎಂದು ಕೂಡ ಕರೆಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next