Advertisement
ಲಾಕ್‌ಡೌನ್, ಕೋವಿಡ್ ಸ್ಥಿತಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟುಮಾಡಬಾರದು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾದ ಸರಳ ವ್ಯವಸ್ಥೆ ರೂಪಿಸಿದ್ದರಿಂದ ವಿದ್ಯಾರ್ಥಿಗಳು ಮನೆ ಯಿಂದಲೇ ಕಾಲೇಜು ಸೀಟು ಪಡೆದಿದ್ದಾರೆ.
Related Articles
Advertisement
ವಾಣಿಜ್ಯ ವಿಭಾಗವೇ ವಿದ್ಯಾರ್ಥಿಗಳ ಆಯ್ಕೆರಾಜ್ಯದ ಬಹುತೇಕ ಜಿಲ್ಲೆಗಳ ಸರಕಾರಿ ಪದವಿ ಕಾಲೇ ಜುಗಳ ವಾಣಿಜ್ಯ ವಿಭಾಗದ ಸೀಟುಗಳು ಭರ್ತಿಯಾಗುತ್ತಿವೆ. ಬಿ.ಕಾಂ., ಬಿಬಿಎಂ ಮತ್ತು ಬಿಬಿಎ ಮೊದಲಾದ ವಾಣಿಜ್ಯ ವಿಭಾಗದ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹಾಗೆಯೇ ವಿಜ್ಞಾನ ವಿಭಾಗದ ಬಿಸಿಎ, ಬಿ.ಎಸ್‌ಸಿ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಿದೆ. ಕೆಲವು ಜಿಲ್ಲೆಗಳಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಹೆಚ್ಚುವರಿ ಕಾಂಬಿನೇಷನ್ ಅಥವಾ ವಿಭಾಗ ತೆರೆಯಲು ಮತ್ತು ಇನ್‌ಟೇಕ್ ಪ್ರಮಾಣ ಹೆಚ್ಚಿಸಲು ಅವಕಾಶ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತದ ಸೀಟು ಹಂಚಿಕೆ ಕಾರ್ಯ ಪೂರ್ಣ ಗೊಂಡ ಬಳಿಕ ಪ್ರಸ್ತಾವನೆ ಪರಿಶೀಲಿಸಿ, ಅಲ್ಲಿರುವ ಮೂಲ ಸೌಕರ್ಯ, ಬೋಧನ ಸಾಮರ್ಥ್ಯ ಇತ್ಯಾದಿ ಅವಲೋಕಿಸಿ ಅನುಮತಿ ನೀಡಲಾಗುತ್ತದೆಂದು ಇಲಾಖೆ ತಿಳಿಸಿದೆ. ಕಳೆಗುಂದುತ್ತಿರುವ ಕಲಾ ವಿಭಾಗ
ಕಳೆದ ನಾಲ್ಕೆ „ದು ವರ್ಷಗಳಿಂದ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕಲಾ ವಿಭಾಗದ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪದವಿಯಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇವೆಲ್ಲ ಕಾರಣಗಳಿಂದ ಈ ವರ್ಷದ ಪದವಿ ಪ್ರವೇಶದಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ಕಡಿಮೆಯಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಕಲಾವಿಭಾಗದ ದಾಖಲಾತಿ ಚೆನ್ನಾಗಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಲಾ ವಿಭಾಗದ ಕಾಂಬಿನೇಷನ್ ಕೂಡ ರದ್ದು ಮಾಡಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಪದವಿ ಕಾಲೇಜಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆಯ ಜತೆಗೆ ಆಫ್ಲೈನ್ ವ್ಯವಸ್ಥೆ ಇದೆ. ಇನ್ನಷ್ಟು ಕಾಲಾವಕಾಶವನ್ನೂ ಒದಗಿಸಲಿದ್ದೇವೆ.
-ಪಿ. ಪ್ರದೀಪ್, ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ರಾಜು ಖಾರ್ವಿ ಕೊಡೇರಿ