Advertisement

‘ವಿದ್ಯಾರ್ಥಿಗಳು ಶಿಕ್ಷಣದೆಡೆ ಗಮನ ನೀಡಿ’

12:41 PM Aug 31, 2018 | |

ಬಜಪೆ : ಕಾಲೇಜು ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ನೀಡಿ. ಪ್ರೀತಿ-ಪ್ರೇಮ ಎಂದು ಸಮಸ್ಯೆಗೆ ಸಿಲುಕಬೇಡಿ. ಇದರಿಂದ ಹುಡುಗಿ ಕಷ್ಟ ಅನುಭವಿಸಿದ್ದೇ ಅಧಿಕ. ಪ್ರೀತಿ ಪ್ರಕರಣಗಳು ಕಂಡು ಬಂದಲ್ಲಿ ಬುದ್ಧಿವಾದ ಹೇಳಲಾಗುತ್ತದೆ. ಹುಡುಗಿ ಅಪ್ರಾಪ್ತಳಾಗಿದ್ದಲ್ಲಿ ಹುಡುಗನ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಬಜಪೆ ಪೊಲೀಸ್‌ ಠಾಣೆಯ ಎಸ್‌.ಐ. ಶಂಕರ ನಾಯರಿ ಹೇಳಿದರು.

Advertisement

ಅವರು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಾನವ ಹಕ್ಕುಗಳ ಸಂಘ, ಮಾನವಿಕ ಸಂಘ, ಮಹಿಳಾ ಘಟಕ ಇದರ ವತಿಯಿಂದ ಬಜಪೆ ಪೊಲೀಸ್‌ ಠಾಣೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಒಂಟಿಯಾಗಿ ಹೋಗದಿರಿ
ಹುಡುಗಿಯರು ಆಭರಣ ಪ್ರದರ್ಶನ ಮಾಡಬೇಡಿ. ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಹೋಗದಿರಿ. ದ್ವಿಚಕ್ರ ವಾಹನದಲ್ಲಿ ವಿಳಾಸ ಕೇಳುವ ನೆಪದಲ್ಲಿ ಸರಗಳ್ಳರು ಬರುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿ. ಯಾವುದೇ ಲೈಂಗಿಕ ದೌರ್ಜನ್ಯವಾದರೆ ದೂರು ನೀಡಿ. ಬೆದರಿಕೆಗೆ ಹೆದರಬೇಡಿ ಎಂದರು.

ಗಾಂಜಾ ಬಗ್ಗೆ ಮಾಹಿತಿ ಕೊಡಿ
ಡ್ರಗ್ಸ್‌, ಗಾಂಜಾ ಚಟುವಟಿಕೆಗಳು ಕಂಡು ಬಂದರೆ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು. ಹೆಡ್‌ ಕಾನ್‌ಸ್ಟೆಬಲ್‌ ಗಳಾದ ಎಂ.ಪ್ರಕಾಶ್‌ಮೂರ್ತಿ, ಚಂದ್ರ ಮೋಹನ್‌, ಹೊನ್ನಪ್ಪ, ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಲಾವಣಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ವಿದ್ಯಾರ್ಥಿ ಸಂಘದ ನಿರ್ದೇಶಕಿ ಪುಪ್ಪಲತಾ, ಮಾನವ ಹಕ್ಕುಗಳ ಸಂಘ, ಮಹಿಳಾ ಘಟಕದ ನಿರ್ದೇಶಕಿ ಚೇತನಾ, ಮಾನವಿಕ ಸಂಘದ ನಿರ್ದೇಶಕಿ ಬಬಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಕ್ಷಿ ಅಗತ್ಯ
ಎಲ್ಲರೂ ದೂರು ಕೊಡುತ್ತಾರೆ. ಆದರೆ ಅದಕ್ಕೆ ಬೇಕಾದ ಸಾಕ್ಷಿಗಳನ್ನು ಪೊಲೀಸರೇ ಹುಡುಕಬೇಕಾಗುತ್ತದೆ. ಆದರೆ ಸಮರ್ಪಕವಾದ ಸಾಕ್ಷಿ ಇಲ್ಲದಿದ್ದರೆ ಪ್ರಕರಣ ಬಿದ್ದು ಹೋಗುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾಕ್ಷಿ ಅತ್ಯಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next