ಅಗಲ್ಪಾಡಿ: ಮನರಂಜನ ಸಾಧನಗಳು ಅನೇಕವಿದ್ದರೂ ವಿದ್ಯಾರ್ಥಿಗಳು ಅವುಗಳ ಕಡೆಗೆ ಗಮನವೀಯದೆ ಓದಿನ ಕಡೆಗೆ ಶ್ರದ್ಧೆ ಹರಿಸಬೇಕು ಎಂದು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು ಅಭಿಪ್ರಾಯಪಟ್ಟರು.
ಅವರು ಶಾಲೆಯಲ್ಲಿ ನಡೆದ “ಪ್ರತಿಭಾ ಪುರಸ್ಕಾರ -19′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ಟಿ.ಎ. ಅಧ್ಯಕ್ಷ ಶ್ರೀಪತಿ ಕೆ. ಸರಸ್ವತೀ ಮಂದಿರವಾದ ಶಾಲೆಯಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ತಲೆಬಾಗಬೇಕು. ಒಳ್ಳೆಯ ಸಂಸ್ಕೃತಿಯನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕಳೆದ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಪ್ಪಂಗಳ ಟ್ರಸ್ಟ್ ಜಯನಗರ ಮಾರ್ಪನಡ್ಕ ಹಾಗೂ ರಕ್ಷಾ ಆರ್.ಸಿ.ಸಿ. ನಾರಂಪಾಡಿಯ ವಿಠಲರಾಜ್ ಪ್ರತೀ ವರ್ಷ ನೀಡುತ್ತಿರುವ ನಗದು ಬಹುಮಾನವನ್ನು ಇಬ್ಬರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಗಿರೀಶ ಎನ್, ಎಂ.ಪಿ.ಟಿ.ಎ. ಅಧ್ಯಕ್ಷೆ ಜಯಂತಿ, ಅಧ್ಯಾಪಕರಾದ ಶ್ರೀನಿವಾಸ ಭಟ್, ಪಿ.ಟಿ.ಎ. ಉಪಾಧ್ಯಕ್ಷ ಗೋಪಾಲ ಡಿ. ಹಾಗೂ ರಕ್ಷಕರು ಈ ಸಂದರ್ಭದಲ್ಲಿ ಶುಭವನ್ನು ಹಾರೈಸಿದರು. ಪ್ರಾಂಶುಪಾಲ ಸತೀಶ ವೈ. ಸ್ವಾಗತಿಸಿದರು. ಅಧ್ಯಾಪಕ ಬಾಲಚಂದ್ರÅ ವಂದಿಸಿದರು. ಅಧ್ಯಾಪಕ ಗಣೇಶ ಕಾರ್ಯಕ್ರಮ ನಿರೂಪಿಸಿದರು
23 ವಿದ್ಯಾರ್ಥಿಗಳಿಗೆ
ಪಿ.ಟಿ.ಎ. ಯಿಂದ ಗೌರವ
ವಿದ್ಯಾರ್ಥಿಗಳನ್ನು ಸ್ಟಾಫ್ ಕೌನ್ಸಿಲ್ ಹಾಗೂ ಪಿ.ಟಿ.ಎ. ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೇನಾನಿ ಹಾಗೂ ವಿದ್ಯಾಭಿಮಾನಿ ಬಾಲಚಂದ್ರ ಕೇಕುಣ್ಣಾಯ ಅವರು ಪ್ರತಿ ವರ್ಷ ತೊಂಬತ್ತು ಶೇಕಡಾಕ್ಕಿಂತ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾವು ನೀಡುತ್ತಿರುವ ಬಹುಮಾನವನ್ನು ಶಾಲೆಯ ಇಪ್ಪತ್ತಮೂರು ಮಂದಿ ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಿದರು.