Advertisement

ನಾಗಾವಿ ಕ್ಯಾಂಪಸ್‌ಗೆ ಬಸ್‌ ಕಲ್ಪಿಸಲು ವಿದ್ಯಾರ್ಥಿಗಳ ಆಗ್ರಹ

02:24 PM Dec 24, 2021 | Team Udayavani |

ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್‌ ನಲ್ಲಿನ ಸರ್ಕಾರಿ ಐಟಿಐ ಕಾಲೇಜು ಹಾಗೂ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿಟಿ ಬಸ್‌ ಸೌಲಭ್ಯ ಒದಗಿಸಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಬಸ್‌ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಜಿಲ್ಲಾ ಸಂಚಾಲಕ ವೆಂಕಟೇಶ ದೇವದುರ್ಗ ಮಾತನಾಡಿ, ಚಿತ್ತಾಪುರ ತಾಲೂಕಿನ ಬಹುತೇಕ ಹಳ್ಳಿಗಳು, ನಗರದ ಹಲವಾರು ಬಡವಣೆಗಳಿಂದ ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವುದರಿಂದ ಅವರಿಗೆ ಸರಿಯಾಗಿ ಸಿಟಿ ಬಸ್‌ ಸೌಲಭ್ಯವಿಲ್ಲ. ಇದು ವಿದ್ಯಾಭ್ಯಾಸ ಮುಂದುವರಿಸಲು ಹಿಂದೇಟು ಹಾಕುವಂತೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಸಾರಿಗೆ ಇಲಾಖೆಯು ಬಸ್‌ಗಳ ಸಂಖ್ಯೆಯು ಕಡಿತ ಗೊಳಿಸಿತ್ತು. ಈಗ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಆದ್ದರಿಂದ 5-6 ಕಿ.ಮೀ ದೂರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಆದರ್ಶ ವಿದ್ಯಾಲಯ ಹಾಗೂ ಸರ್ಕಾರಿ ವಸತಿ ನಿಲಯಗಳು ಇವೆ. ಅಲ್ಲಿಗೆ ದಿನಾಲೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಈ ಮಾರ್ಗಕ್ಕೆ ಸರಿಯಾದ ಸಿಟಿ ಬಸ್ಸಿನ ಸೌಲಭ್ಯವಿಲ್ಲ ಎಂದರು.

ರಾವೂರು ಗ್ರಾಮಕ್ಕೆ ತೆರಳಲು ವಿದ್ಯಾರ್ಥಿ ಗಳಿಗೆ ಸಂಜೆ 5 ಗಂಟೆಗೆ ಒಂದೇ ಬಸ್‌ ಇರುವುದರಿಂದ ಎಲ್ಲ ವಿದ್ಯಾರ್ಥಿಗಳು ಅದೇ ಬಸ್ಸಿಗೆ ಹೋಗುವಂತೆ ಆಗಿದೆ. ಆದ್ದರಿಂದ ಅವಶ್ಯಕತೆಗೆ ತಕ್ಕಂತೆ ಬಸ್ಸಿನ ಸೌಲಭ್ಯ ಒದಗಿಸಬೇಕು ಎಂದು ತಾಲೂಕು ಸಂಚಾಲಕಿ ಪ್ರೀತಿ ದೊಡ್ಡಮನಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next