ಉಡುಪಿ: ಜಗತ್ತು ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಕ್ರಿಯಾಶೀಲಾ ಬದಲಾವಣೆ ತರಲು ಯುವಜನತೆಗೆ ಉತ್ತಮ ಅವಕಾಶವಿದೆ. ಹೀಗಾಗಿ ದೇಶದ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾಲು ಪ್ರಮುಖವಾಗಿದೆ ಎಂದು ಸಿಲ್ವಂಟ್ ಅಡ್ವಿಸೊರ್ನ ಸ್ಥಾಪಕ, ನಿರ್ದೇಶಕ ಆನಂದ್ ಸುದರ್ಶನ್ ಹೇಳಿದರು.
ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ಆರಂಭವಾದ ಮಣಿಪಾಲ ವಿವಿಯ 25ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯಗಳಲ್ಲಿ ಕೂತೂಹಲ ಮೂಡಬೇಕು. ಇದರಿಂದ ಹೊಸಹೊಸ ಆವಿಷ್ಕಾರ ಸಾಧ್ಯವಾಗುತ್ತದೆ ಎಂದರು.
ಪರ್ಯಾಯ ವಸ್ತು ಆವಿಷ್ಕಾರ ರಾಜಕೀಯವಾಗಿಯೂ ನಿರ್ದಿಷ್ಟ ಸಿದ್ಧಾಂತಕ್ಕೆ ಒಳಗಾಗಿ ಮುಂದುವರಿ ಯಬಾರದು. ಸದಾ ಹೊಸದಾಗಿ ಬದಲಾವಣೆ ತರಲು ಪ್ರಯತ್ನಿಸಬೇಕು. ಆಧಾರ್‌ನಂತಹ ಯೋಜನೆ ಇಡೀ ಮಾನವ ಇತಿಹಾಸಕ್ಕೆ ಹೆಗ್ಗುರುತಾಗಿ ಮೂಡಿಬಂದಿದೆ. ಸ್ಮಾರ್ಟ್‌ಫೋನ್, ಇತರ ಸಾಮಾಜಿಕ ಜಾಲತಾಣಗಳು ಜಗತ್ತಿನ ಅನೇಕ ನಿಯಮಗಳನ್ನು ಬದಲಾಯಿಸುತ್ತಿವೆ. ಹಳೆಯ ವಸ್ತುಗಳಿಗೆ
ಪರ್ಯಾಯವಾಗಿ ಹೊಸ ವಸ್ತುಗಳ ಆವಿಷ್ಕಾರ ಆಗುತ್ತಿರುವುದರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ ಎಂದರು.
ಮೊದಲ ದಿನದ ಸಮಾರಂಭದಲ್ಲಿ 1,246 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು 24 ಮಂದಿಗೆ ಪಿಎಚ್‌ಡಿ ಪದವಿ ನೀಡಲಾಯಿತು.
ಮಣಿಪಾಲ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಸಹಕುಲಪತಿ ಡಾ| ಸುರೇಂದ್ರ ಶೆಟ್ಟಿ, ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು, ಮಣಿಪಾಲ್ ಅಕಾಡೆಮಿ ಆಫ್ ಬ್ಯಾಂಕಿಂಗ್‌ನ ನಿರ್ದೇಶಕ ಡಾ| ತಮ್ಮಯ್ಯ, ಡಾ| ರಂಜನ್ ಪೈ, ಡಾ| ಎಚ್. ವಿನೋದ್ ಭಟ್, ಪದ್ಮಶ್ರೀ ಸುದರ್ಶನ್, ಡಾ| ವಿನೋದ್ ಥಾಮಸ್, ಸುಮಾ ನಾಯರ್, ಡಾ| ಶ್ಯಾಮಲಾ ಹಂದೆ, ಪರ್ವಧಾವರ್ಧಿನಿ ಉಪಸ್ಥಿತರಿದ್ದರು.