ಗುಳೇದಗುಡ್ಡ: ಪಟ್ಟಣದ ಪಿಇಟಿ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಯೋಗ ಸ್ಪರ್ಧೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಹಾಂತೇಶ ಬಸವರಾಜ ಸುರಪುರ, ವೀರೇಶ ಮುತ್ತು ಬಳಿಗಾರ ವಿದ್ಯಾರ್ಥಿನಿಯರಾದ ಸಹನಾ ಬಸವರಾಜ ಮಾನುಟಗಿ, ಸುಪ್ರಿತಾ ಸಿದ್ದಪ್ಪ ಅರಕಾಲಚಿಟ್ಟಿ ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳು ಭುವನೇಶ್ವರದ ಕಳಿಂಗ ಕೈಗಾರಿಕಾ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಅಖೀಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪುರುಷ ಮತ್ತು ಮಹಿಳಾ ಯೋಗ ಚಾಂಪಿಯನ್‌ಶಿಪ್‌ನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದರು.
ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಚಿದಾನಂದ ನಂದಾರ, ತಂಡದ ಮ್ಯಾನೇಜರ್-ಕೋಚ್ ಆಗಿದ್ದರು. ಪಿಇಟಿ ಸಂಸ್ಥೆಯ ಚೇರಮನ್ ಕೆ. ಆರ್. ಭಂಡಾರಿ, ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ನಿರ್ದೇಶಕ ಮಂಡಳಿ, ಸದಸ್ಯರು, ಪ್ರಾಚಾರ್ಯ ಡಾ| ಎನ್. ವೈ. ಬಡಣ್ಣವರ ಅಭಿನಂದಿಸಿದ್ದಾರೆ.