Advertisement

ರೈಲು ಹತ್ತಲು ಅವಕಾಶ ನೀಡುತ್ತಿಲ್ಲ : ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಯ ಅಳಲು

07:37 PM Mar 02, 2022 | Team Udayavani |

ರಬಕವಿ-ಬನಹಟ್ಟಿ: ಉಕ್ರೇನ್ ದೇಶದ ಓಲೆಸ್ಕಾವಿಕ್ಸ್ ನಗರದಲ್ಲಿರುವ ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ರೈಲು ನಿಲ್ದಾಣಕ್ಕೆ ಬಂದಿದ್ದು, ಆದರೆ ಅಲ್ಲಿರುವ ಅಧಿಕಾರಿಗಳು ನಮ್ಮನ್ನು ರೈಲು ಹತ್ತಲು ಬಿಡುತ್ತಿಲ್ಲ. ಹೆಚ್ಚು ಹಣವನ್ನು ಕೊಡುತ್ತೇವೆ ಎಂದರು ಬಿಡುತ್ತಿಲ್ಲ ಎಂದು ಕಾರ್ಕಿವಾ ರೈಲು ನಿಲ್ದಾಣದಲ್ಲಿರುವ ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ವೈಸ್ ಮೆಸೆಜ್ ಮೂಲಕ ಪತ್ರಿಕೆಗೆ ತಿಳಿಸಿದರು.

Advertisement

ಇಲ್ಲಿ ಭಾರತೀಯರನ್ನು ಮಲತಾಯಿ ಧೋರಣೆಯಿಂದ ಕಾಣುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರು ಒಂದು ರೈಲು ಮೂಲಕ ತೆರಳಿದ್ದಾರೆ. ರೈಲು ನಿಲ್ದಾಣದಲ್ಲಿ ಇನ್ನೂ ಸಾವಿರಕ್ಕಿಂತ ಹೆಚ್ಚು ಜನರು ಇದ್ದಾರೆ. ನಮ್ಮ ರಕ್ಷಣೆಗೆ ಯಾರು ಬರುತ್ತಿಲ್ಲ. ಬಹಳಷ್ಟು ಆತಂಕವಾಗುತ್ತಿದೆ.

ಇನ್ನೂ ಕೆಲವೆ ಗಂಟೆಗಳಲ್ಲಿ ಇಲ್ಲಿಯೂ ಕೂಡಾ ಬಾಂಬ್ ದಾಳಿ ನಡೆಯಲಿದೆ ಎಂಬ ಸುದ್ದಿ ದಟ್ಟವಾಗುತ್ತಿದೆ ಎಂದು ಕಿರಣ ಸವದಿ ಪತ್ರಿಕೆಗೆ ತಿಳಿಸಿದರು.

ಇದನ್ನೂ ಓದಿ : ಠಾಣೆ ಮೇಲೆ ಪಣಜಿ ಬಿಜೆಪಿ ಶಾಸಕ ದಾಳಿ ಕೇಸ್ : ವಿಚಾರಣೆ ಮಾರ್ಚ್ 7ಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next