Advertisement
ಚೊಕ್ಕಬೆಟ್ಟುವಿನ ಅಗರಮೇಲು ಎಂಬಲ್ಲಿ ನಡೆದ ಘಟನೆ ಇದು, ವಿದ್ಯಾರ್ಥಿ ಪ್ರಮಿತ್. ಈತ ತಾನಿರುವ ವಸತಿ ಸಮುಚ್ಚಯದ ಎದುರು ತಗ್ಗಿನಲ್ಲಿರುವ ಮನೆಯ ಒಳಗೆ ನೀರು ನುಗ್ಗಿ ಪೂರ್ತಿ ಮುಳುಗಿರುವುದನ್ನು, ಹಿರಿಯ ದಂಪತಿಯಾದ ಸಿರಿಲ್ ಮತ್ತು ಕ್ರಿಸ್ಸಿ ಮುಳುಗುತ್ತಿರುವುದನ್ನು ಕಂಡು ಅವರನ್ನು ಹಗ್ಗದ ಸಹಾಯದೊಂದಿಗೆ ರಕ್ಷಿಸಿ ಶ್ಲಾಘನೆಗೆ ಪಾತ್ರನಾಗಿದ್ದಾನೆ. ತಾನು ನೀರಿನ ಸೆಳೆತಕ್ಕೆ ಒಳಗಾದರೂ ಧೃತಿಗೆಡದೆ ಪಾರಾಗಿದ್ದಾನೆ.
ಈಗ ಎಲ್ಲವೂ ಇದ್ದು ಈಗ ಏನೂ ಇಲ್ಲದಂತಹ ಸ್ಥಿತಿ ಇಲ್ಲಿನ ನಾಗರಿಕರದು. ಮಂಗಳವಾರ ಮಳೆನೀರು ಏಕಾಏಕಿ ಪ್ರವಾಹವಾಗಿ ಹರಿದು ಬಂದಾಗ ಹಲವು ಮನೆಗಳ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳೆಲ್ಲವೂ ನೀರುಪಾಲಾದವು. ಸೊತ್ತುಗಳನ್ನು ರಕ್ಷಿಸುವ ಪ್ರಯತ್ನ ವ್ಯರ್ಥವಾಗಿ ಕೊನೆಗೆ ಜೀವರಕ್ಷಣೆಗಾಗಿ ಕಟ್ಟಡದ ಮೊದಲ ಮಹಡಿ, ಅಟ್ಟಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಎಲ್ಲೆಲ್ಲೂ ಕತ್ತಲೆ ಆವರಿಸಿತು. . ಇವರ ಮನೆಯ ಎಲ್ಲವೂ ನೀರು ಪಾಲಾಗಿವೆ. ಸಮೀಪದ ಪ್ರವೀಣ್ ಪದಕಣ್ಣಾಯ ಅವರ ಮನೆಯ ಕಥೆಯೂ ಇದೇ. ಕೆಸರುಮಯವಾದ ಮನೆ ಸ್ವತ್ಛಗೊಳಿಸಲು ಹರಸಾಹಸ ಪಡುತ್ತಿರುವ ದೃಶ್ಯ ಈ ಬಡಾವಣೆಯ ಎಲ್ಲ ಮನೆಗಳಲ್ಲೂ ಕಂಡುಬಂತು.
Related Articles
ನಮಗೆ ನೆರೆಯ ಸುದ್ದಿ ತಿಳಿದ ತತ್‌ಕ್ಷಣ ಸ್ಥಳೀಯರು ಹಾಗೂ ಪೊಲೀಸರ ಜತೆ ಸೇರಿ ಜನರನ್ನು ಸ್ಥಳಾಂತರಿಸಲು ಕಾರ್ಯಪ್ರವೃತ್ತರಾದೆವು. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರುತ್ತಿದ್ದುದರಿಂದ ತುರ್ತಾಗಿ ಬೇಕಾದ ದೋಣಿ, ಟ್ಯೂಬ್‌ಗಳು ಇಲ್ಲದಿದ್ದರೂ ಕಾರ್ಯಾಚರಣೆಗೆ ಇಳಿದೆವು. ನೆರೆಯ ಸೆಳೆತ ಇದ್ದುದರಿಂದ ಸಮಸ್ಯೆ ಎದುರಾಯಿತು.
- ಗುಣಶೇಖರ ಶೆಟ್ಟಿ, ಕಾರ್ಪೊರೇಟರ್
Advertisement
ಯಾರೂ ಬರಲಿಲ್ಲ: ಜೀವ ಉಳಿದದ್ದೇ ಹೆಚ್ಚು!“ಉದಯವಾಣಿ’ಯೊಂದಿಗೆ ಮಾತನಾಡಿದ ಹಿರಿಯರಾದ ಸಿರಿಲ್, ರಕ್ಷಣೆಗಾಗಿ ಸತತ ವಾಗಿ ಕರೆ ಮಾಡಿ ದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕದಲ್ಲಿ ವಾಹನವಿಲ್ಲ ಎಂಬ ಸಬೂಬು ಸಿಕ್ಕಿತು, ತುರ್ತು ಕರೆ ಕೇಂದ್ರಗಳು ಸ್ಪಂದಿಸಲೇ ಇಲ್ಲ. ಸ್ಥಳೀಯ ಅಧಿಕಾರಿಗಳೂ ಕಂಡು ಬರಲಿಲ್ಲ. ನಮ್ಮನ್ನು ಒಬ್ಬ ವಿದ್ಯಾರ್ಥಿ ರಕ್ಷಿಸಬೇಕಾಯಿತು ಎಂದು ಕಣ್ಣೀರಿಟ್ಟರು.