Advertisement

ವಿದ್ಯಾರ್ಥಿನಿಯರ ಕರಾಟೆ ತರಬೇತಿಗೆ ಚಾಲನೆ

05:51 PM Jan 22, 2022 | Shwetha M |

ಮುದ್ದೇಬಿಹಾಳ: 8-10 ವರ್ಷಗಳ ಹೋರಾಟದ ಪ್ರತಿಫಲವಾಗಿ ಸರ್ಕಾರ ವಿವಿಧ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕೊಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಎಲ್ಲರೂ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಂಡು ಆತ್ಮರಕ್ಷಣೆಯ ಕಲೆ ಕರಾಟೆಯನ್ನು ಮನಗೊಟ್ಟು ಕಲಿತು ಭವಿಷ್ಯದಲ್ಲಿನ ತೊಂದರೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಬಲತೆ ಸಾಧಿಸಬೇಕು ಎಂದು ಕರ್ನಾಟಕ ಕರಾಟೆ ಡು ಸಂಸ್ಥೆಯ ರಾಜ್ಯಾಧ್ಯಕ್ಷ ಶಿವಕುಮಾರ ಶಾರದಳ್ಳಿ ಹೇಳಿದರು.

Advertisement

ಡಿ.ದೇವರಾಜ ಅರಸು ಮತ್ತು ಸರ್ಕಾರಿ ಬಾಲಕಿಯರ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ನಡೆದ ಕರಾಟೆ ತರಬೇತಿಗೆ ಚಾಲನೆ ನೀಡುವ ಪ್ರತ್ಯೇಕ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ವಿಜಯಪುರ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುವ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ಸೇರಿ ಒಟ್ಟು 39 ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವ ಅವಕಾಶ ದೊರಕಿದೆ ಎಂದರು.

ವಸತಿ ನಿಲಯಗಳ ಮೇಲ್ವಿಚಾರಕಿಯ ರಾದ ಇಂದುಮತಿ ಚವ್ಹಾಣ, ಎಫ್‌. ಎಚ್‌.ಕಾಳಗಿ ಮಾತನಾಡಿದರು. ಕರಾಟೆ ಶಿಕ್ಷಕಿಯರಾದ ಸುಮಾ ತಡವಲಕರ, ಅಖೀಲಾ ಸೊನ್ನದ, ಮಧು ಘಾಗರೆ ವೇದಿಕೆಯಲ್ಲಿದ್ದರು. ಆಯಾ ವಸತಿ ನಿಲಯಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next