Advertisement

ಚುನಾವಣೆಯಲ್ಲಿ ಗೆಲ್ಲುವುದಕ್ಕೆಂದು ವಿದ್ಯಾರ್ಥಿನಿಯರ ಕಾಲಿಗೆ ಬಿದ್ದರು!- ವಿಡಿಯೋ ವೈರಲ್‌

11:16 PM Aug 27, 2022 | Team Udayavani |

ರಾಜಸ್ಥಾನ: ರಾಜಕಾರಣಿಗಳು ಮತಕ್ಕಾಗಿ ಹಲವಾರು ಭರವಸೆ ನೀಡುವುದು ಸಹಜ. ಆದರೆ ರಾಜಸ್ಥಾನದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲ್ಲುವುದಕ್ಕೆಂದು ವಿದ್ಯಾರ್ಥಿ ನಾಯಕರು ವಿದ್ಯಾರ್ಥಿನಿಯರ ಕಾಲಿಗೇ ಬಿದ್ದುಬಿಟ್ಟಿದ್ದಾರೆ!

Advertisement

ಹೌದು, ಮತ ಹಾಕಲು ಹೊರಟ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಾಯಕರು ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ನೀವು ನಮಗೇ ಮತ ಹಾಕಬೇಕು’ ಎಂದು ಬೇಡಿಕೊಳ್ಳುತ್ತಾರೆ. ಮುಂದೆ ಹೆಜ್ಜೆ ಹಾಕುವುದಕ್ಕೂ ಆಗದಂತೆ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಮತಕ್ಕಾಗಿ ಅಂಗಲಾಚುತ್ತಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next