Advertisement

Madikeri ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು

11:52 PM Feb 27, 2024 | Team Udayavani |

ಮಡಿಕೇರಿ: ವಿದ್ಯಾರ್ಥಿಯೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಶಾಲನಗರದ ಕಣಿವೆಯಲ್ಲಿ ಸೋಮವಾರ ಸಂಭವಿಸಿದೆ.

Advertisement

ಮೈಸೂರು ಮೂಲದ ವಿದ್ಯಾರ್ಥಿ ಹೃತ್ವಿಕ್‌ (16) ಮೃತಪಟ್ಟವರು.

ಕುಶಾಲನಗರದಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದ ಹೃತ್ವಿಕ್‌ ಸ್ನೇಹಿತರ ಜತೆ ಸೇರಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದು, ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ.

ಮೃತದೇಹವನ್ನು ಅಗ್ನಿಶಾಮಕ ದಳದ ಸಿಬಂದಿ ಮೇಲೆತ್ತಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next