Advertisement
ಅವರು ತಾಯಿಯೊಂದಿಗೆ ವಾಸವಾಗಿದ್ದು, ಮಡಂತ್ಯಾರಿನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಯಲ್ಲಿ ಕಲಿಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಖನ್ನತೆಗೊಳಗಾದವನಂತೆ ವರ್ತಿಸುತ್ತಿದ್ದ ಅವರು ಒಂದೂವರೆ ತಿಂಗಳಿನಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದರು. ಫೆ. 14ರ ರಾತ್ರಿ ತಾಯಿ ನೆರೆಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬಂದಾಗ ಈತ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.