Advertisement

ಉಕ್ರೇನ್ ನಿಂದ ತವರಿಗೆ ಮರಳಿದ ರಬಕವಿಯ ಅಶ್ವಥ ಗುರವ

05:21 PM Mar 08, 2022 | Team Udayavani |

ರಬಕವಿ-ಬನಹಟ್ಟಿ: ಖಾರ್ಕಿವಾದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ಎಂಬಿಬಿಎಸ್ ನಲ್ಲಿ ಓದುತ್ತಿದ್ದ ರಬಕವಿ ನಗರದ ಅಶ್ವಥ ಗುರುವ ಸೋಮವಾರ ತವರಿಗೆ ಆಗಮಿಸಿದರು. ತಂದೆ, ತಾಯಿ, ಹಾಗೂ ಸುತ್ತ ಮುತ್ತಲಿನ ಸಂಬಂಧಿಕರು ಅವರ ಮನೆಗೆ ಭೇಟಿ ನೀಡಿ ಸಂಭ್ರಮಿಸಿದರು.

Advertisement

ಇದೇ ಸಂದರ್ಭದಲ್ಲಿ ಅಶ್ವಥ ಪತ್ರಿಕೆಯ ಜೊತೆಗೆ ಮಾತನಾಡಿ, ಖಾರ್ಕಿವಾ ನಗರದ ಮೇಲೆ ಯುದ್ಧ ಆರಂಭವಾದ ನಂತರ ಅಲ್ಲಿಯ ನೋಕೋವಾ ಮೆಟ್ರೊ ರೈಲು ನಿಲ್ದಾಣದಲ್ಲಿ ಐದು ದಿನಗಳ ಕಾಲ ಇದ್ದು, ನಂತರ ಅಲ್ಲಿಂದ ಟ್ರೇನ್ ಮೂಲಕ ಲಿವಿ ನಗರಕ್ಕೆ ಬಂದು ತಲುಪಿದೆವು. ನಂತರ ಅಲ್ಲಿಂದ ಪೊಲೊಂಡ್ ದೇಶದ ಗಡಿಗೆ ಬಂದು ನೆಲೆಸಿದವು. ಅಲ್ಲಿ ಭಾರತೀಯ ರಾಯಭಾರಿಗಳು ನಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿದರು. ಅಲ್ಲಿಂದ ಭಾರತ ಸರ್ಕಾರ ನಮ್ಮನ್ನು ದೆಹಲಿಗೆ ಕರೆದುಕೊಂಡು ಬಂದರು. ನಂತರ ದೆಹಲಿಯಲ್ಲಿ ನಮ್ಮನ್ನು ಕರ್ನಾಟಕ ಭವನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಂದು ದಿನ ವಿಶ್ರಾಂತಿ ಪಡೆದುಕೊಂಡ ನಂತರ ಮತ್ತೆ ಬೆಂಗಳೂರಿಗೆ ಕರೆದುಕೊಂಡು ಬಂದರು. ಸೋಮವಾರ ಸಂಜೆ ರಬಕವಿಯನ್ನು ತಲುಪಿದೆವು.

ನಮ್ಮನ್ನು ಖಾರ್ಕಿವಾ ನಗರದಿಂದ ರಬಕವಿ ನಗರಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಭಾರತ ಸರ್ಕಾರ ನಮಗೆ ಬಹಳಷ್ಟು ಸಹಾಯ ಮಾಡಿತು. ಉಕ್ರೇನ್ದಿಂದ ರಬಕವಿಗೆ ಬಂದು ತಲುಪುವವರೆಗೆ ನಮಗೆ ಯಾವುದೆ ಖರ್ಚಿನ ತೊಂದರೆಯಾಗಲಿಲ್ಲ. ಪ್ರತಿಯೊಂದು ಖರ್ಚನ್ನು ಸರ್ಕಾರವೇ ನೋಡಿಕೊಂಡಿತು. ಭಾರತ ಸರ್ಕಾರಕ್ಕೆ ಎಷ್ಟೆ ಧನ್ಯವಾದ ಹೇಳಿದರೂ ಸಾಲದು ಎಂದು ಅಶ್ವಥ ಗುರುವ ಪತ್ರಿಕೆಗೆ ತಿಳಿಸಿದರು.

ಇದನ್ನೂ ಓದಿ : ಜೇಸನ್ ರಾಯ್ ಬದಲಿಗೆ ಹೊಸ ಆಟಗಾರನನ್ನು ಆಯ್ಕೆ ಮಾಡಿದ ಗುಜರಾತ್ ಟೈಟಾನ್ಸ್

Advertisement

Udayavani is now on Telegram. Click here to join our channel and stay updated with the latest news.

Next