Advertisement

Delhi: ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 14ವರ್ಷದ ವಿದ್ಯಾರ್ಥಿ

12:46 PM Aug 03, 2024 | Team Udayavani |

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆ, ಆಸ್ಪತ್ರೆ, ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಇದೆ ಎಂದು ಇಮೇಲ್ ಮೂಲಕ ಬೆದರಿಕೆ ಹಾಕುವಂತಹ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ ಅದರಂತೆ ಶುಕ್ರವಾರ(ಆಗಸ್ಟ್ 2) ರಂದು ದೆಹಲಿಯ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಗೊತ್ತೇ ಇದೆ. ದಕ್ಷಿಣ ದೆಹಲಿಯ ಸಮ್ಮರ್ ಫೀಲ್ಡ್ಸ್ ಶಾಲೆಗೆ ಗುರುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.

Advertisement

ಶುಕ್ರವಾರ ಶಾಲೆಗೆ ಬಂದ ಶಾಲಾ ಆಡಳಿತ ಮಂಡಳಿ ಮೇಲ್‌ ಅನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಆದರೆ ಎಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ

ಇದಾದ ಬಳಿಕ ಇದೊಂದು ಸುಳ್ಳು ಬೆದರಿಕೆ ಎಂಬುದು ತನಿಖೆ ನಡಿಸಿದ ಪೊಲೀಸರಿಂದ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ ಇದೆ ಶಾಲೆಯಲ್ಲಿ ಕಲಿಯುತ್ತಿರುವ ಹದಿನಾಲ್ಕು ವರ್ಷದ ಬಾಲಕ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಾಲಕನನ್ನು ತನಿಖೆಗೆ ಒಳಪಡಿಸಿದ ವೇಳೆ ತನಗೆ ಶಾಲೆಗೆ ಹೋಗಲು ಮನಸ್ಸಿರಲಿಲ್ಲ ಹಾಗಾಗಿ ಏನು ಮಾಡುವುದು ಎಂದು ಆಲೋಚನೆ ಮಾಡುವಾಗ ಬಾಂಬ್ ಬೆದರಿಕೆ ಹಾಕಿದರೆ ಎಂದು ಆಲೋಚಿಸಿ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಯಾರಿಗೂ ಅನುಮಾನ ಬರಬಾರದೆಂದು ತನ್ನ ಶಾಲೆಯ ಜೊತೆಗೆ ಇತರ ಎರಡು ಶಾಲೆಗಳ ಹೆಸರನ್ನು ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Wayanad; 358ಕ್ಕೇರಿದ ಮೃತರ ಸಂಖ್ಯೆ, ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದ ಕುಟುಂಬ…

Advertisement

Udayavani is now on Telegram. Click here to join our channel and stay updated with the latest news.

Next