Advertisement

ಕೆರೆ ಸರ್ವೇ ಕಾರ್ಯ ಮುಗಿಸದಿದ್ದಲ್ಲಿ ಹೋರಾಟ

10:19 AM Jun 24, 2019 | Team Udayavani |

ಬ್ಯಾಡಗಿ: ಸರ್ವೆ ಅಧಿಕಾರಿಗಳ ನಿರ್ಲಕ್ಸ್ಯ ತಾಲೂಕಿನ ಬಹುತೇಕ ಕೆರೆಗಳು ಒತ್ತುವರಿಯಾಗಿ ಅಸ್ಥಿತ್ವ ಕಳೆದುಕೊಂಡಿವೆ. ತಾಲೂಕಿನಲ್ಲಿರುವ ಕೆರೆಗಳ ಸೂಕ್ತ ಸರ್ವೆ ಕಾರ್ಯ ನಡೆದಿಲ್ಲ. ಸೂಕ್ತ ದಾಖಲಾತಿ ಸಹ ಅಧಿಕಾರಿಗಳು ಇಟ್ಟುಕೊಂಡಿಲ್ಲ. ಮುಂದಿನ 15 ದಿನಗಳಲ್ಲಿ ಕೆರೆಗಳ ಸರ್ವೆಕಾರ್ಯ ಮುಗಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ರೈತ ಮುಖಂಡ ಶಶಿಧರಸ್ವಾಮಿ ಛತ್ರದ ಮಠ ಎಚ್ಚರಿಸಿದರು.

Advertisement

ಶುಕ್ರವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸರ್ವೇ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಶಶಿಧರಸ್ವಾಮಿ, ತಾಲೂಕಿನ ಪಾಲಿಗೆ ಹೀರೆನಂದಿಹಳ್ಳಿಯ ಪುರಾತನ ಕೆರೆ ಸುಮಾರು 380ಕ್ಕೂ ಹೆಚ್ಚು ಎಕರೆಯಷ್ಟಿತು. ಆದರೆ ಈಗ ಏಷ್ಟು ಉಳಿದಿದೆ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಉಳಿದಿರುವ ಕೆರೆಯಲ್ಲಿ ಹಲವಾರು ಎಕರೆಯಷ್ಟು ಉಳಿಮೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಪರಿಶೀಲನೆ ಮಾಡಲು ನೀವೆಷ್ಟು ಬಾರಿ ಕೆರೆಗೆ ಭೇಟಿ ನೀಡಿದ್ದೀರಾ ಮೊದಲು ತಿಳಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಲಾಗದೆ ಸಣ್ಣ ನಿರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿ ಮೌನಕ್ಕೆ ಶರಣಾದರು.

ಕಿರಣಕುಮಾರ ಗಡಿಗೋಳ ಮಾತನಾಡಿ, ಈಗಾಗಲೇ ಹಲವಾರು ಬಾರಿ ಭೂಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಭೂಮಿಯನ್ನು ನೀಡಿದ ಕೆಲವರು ಇನ್ನೂಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾಗಿ ತಿಳಿದು ಬಂದಿದೆ. ಅವರು ನ್ಯಾಯಾಲಯಕ್ಕೆ ಹೋಗಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಈಗಿರುವ ಸರಕಾರಿ ಕೆರೆ ಜಾಗೆ ಅತಿಕ್ರಮಣ ಮಾಡಿ ಬಿತ್ತನೆ ಕಾರ್ಯಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಣ್ಣ ನೀರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳ ವರದಿಯನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ತಹಶೀಲ್ದಾರ್‌ ಗುರು ಬಸವರಾಜ ಮೂಲ ನಕ್ಷೆ ಪ್ರಕಾರ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಂತರದ ಕೆರೆ ವಿಸ್ತೀರ್ಣವನ್ನು ದಾಖಲೆಗಳ ಮೂಲಕ ಇನ್ನೆಂಟು ದಿನಗಳಲ್ಲಿ ಹಾಜರು ಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸರ್ವೇ ಅಧಿಕಾರಿಗಳು ಉಳಿದ ಎಂಟು ದಿನದಲ್ಲಿ ಕೆರೆಯ ಸರ್ವೇ ಕಾರ್ಯ ಮುಗಿಸಿಕೊಡಲೇಬೇಕು ಎಂದು ತಾಕೀತು ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next