ನವದೆಹಲಿ : ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪನವಾದ ವರದಿಯಾಗಿದೆ ಇದರ ಜೊತೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 2:28 ಗಂಟೆಗೆ ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಉತ್ತರಾಖಂಡದ ಪಿಥೋರಘರ್‌ನಿಂದ ಪೂರ್ವಕ್ಕೆ 148 ಕಿಮೀ ದೂರದಲ್ಲಿರುವ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಸುತ್ತಮುತ್ತಲೂ ಕಂಪಿಸಿದ ಅನುಭವವಾಗಿದ್ದು ಇದರ ವಿಡಿಯೋವನ್ನು ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Related Articles
ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರಿ ಗದ್ದಲದ ಹಿನ್ನಲೆ ದೆಹಲಿ ಮೇಯರ್ ಆಯ್ಕೆ ಮಾಡದೆ ಸದನ ಮುಂದೂಡಿಕೆ