Advertisement

ಮಂಗಳೂರಿನಲ್ಲಿ ಬಿರುಸಿನ ಮಳೆ; ತಗ್ಗು ಪ್ರದೇಶಗಳು ಜಲಾವೃತ

08:01 PM Oct 13, 2021 | Team Udayavani |

ಮಹಾನಗರ: ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಭಾರತೀಯ ಉಪಖಂಡ ಪ್ರದೇಶದಲ್ಲಿ ನಿಮ್ನ ಒತ್ತಡ ನಿರ್ಮಾಣವಾದ ಕಾರಣ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ನಗರದಲ್ಲಿ ಬುಧವಾರವೂ ಮಳೆ ಮುಂದುವರಿದಿತ್ತು.

Advertisement

ನಗರದಲ್ಲಿ ಬೆಳಗ್ಗಿನ ವೇಳೆ ಮಳೆ ವೇಗ ಪಡೆದಿದ್ದು, ಬಳಿಕ ಮಳೆ ತೀವ್ರತೆ ಕಡಿಮೆ ಯಾಗಿ ಮೋಡ ಕವಿದ ವಾತಾವರಣ ಇತ್ತು. ಮಳೆ ಬಂದರೂ ಗರಿಷ್ಠ ಉಷ್ಣಾಂಶ ಹೆಚ್ಚಿತ್ತು. ಮಂಗಳೂರಿನಲ್ಲಿ ಮಂಗಳವಾರ ದಂದು ತಡರಾತ್ರಿಯವರೆಗೆ ಭಾರೀ ಮಳೆ ಯಾಗಿದ್ದು, ನಗರದ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದವು. ನಗರದ ಕೆಪಿಟಿ, ನಂತೂರು, ಯೆಯ್ನಾಡಿ, ಕೊಟ್ಟಾರ ಸಹಿತ ಬಹುತೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾ ಯಿತು.

ಭಾರೀ ಮಳೆಗೆ ಮಂಗಳವಾರ ರಾತ್ರಿ ಕೊಟ್ಟಾರಚೌಕಿ ಫ್ಲೈಓವರ್‌ ಕೆಳಗಡೆ ರಸ್ತೆಯುದ್ದಕ್ಕೂ ನೀರು ನಿಂತು ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು. ರಾಜಕಾಲುವೆಯಿಂದ ನೀರು ಉಕ್ಕಿ ರಸ್ತೆಗೆ ಬಂದಿದೆ.

ಗಲೀಜು ನೀರು ಅಕ್ಕಪಕ್ಕದ ಮನೆಗೆಳಿಗೆ, ಅಂಗಡಿಯೊಳಗೆ ನುಗ್ಗಿತ್ತು. ಅಂಗಡಿ ಮಾಲಕರಿಗೆ ನಷ್ಟ ಉಂಟಾಗಿರುವುದಲ್ಲದೆ, ಸುತ್ತಲೂ ದುರ್ವಾಸನೆಯಿಂದ ಕೂಡಿತ್ತು. ಬುಧವಾರ ಸ್ವತ್ಛಗೊಳಿಸುತ್ತಿರುವ ದೃಶ್ಯ ಕಂಡುಬಂತು. ಮೇಯರ್‌ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಮನಪಾ ಸದಸ್ಯರು, ಅಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಇದನ್ನೂ ಓದಿ:ಗೋವಾ ವಿಧಾನಸಭಾ ಚುನಾವಣೆ: ದೇವೇಂದ್ರ ಫಡ್ನವೀಸ್ ನಾಳೆ ಗೋವಾಕ್ಕೆ ಆಗಮನ

Advertisement

ದೇರೆಬೈಲ್‌ ಬಳಿ ಕುಸಿದ ರಸ್ತೆ
ಧಾರಾಕಾರ ಮಳೆಗೆ ದೇರೆಬೈಲ್‌ ಸಮೀಪದ ಲ್ಯಾಂಡ್‌ಲಿಂಕ್ಸ್‌ ಒಳ ರಸ್ತೆ ಕುಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂರು ತಿಂಗಳುಗಳ ಹಿಂದೆ ಇಲ್ಲಿ ಸಣ್ಣ ಗುಂಡಿಯೊಂದು ಕಾಣಿಸಿದ್ದು, ತತ್‌ಕ್ಷಣ ಸ್ಥಳೀಯರು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದಿದ್ದರು. ಆದರೆ ದುರಸ್ತಿ ಪಡಿಸದ ಕಾರಣ ಈ ರಸ್ತೆ ಇದೀಗ ಕುಸಿದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆ ಬಂದರೆ ಅಂಗಡಿಯೊಳಗೆ ನೀರು
ಕೊಟ್ಟಾರ ಚೌಕಿ ಮೇಲ್ಸೇತುವೆ ಕೆಳಗಿನ ಸರ್ವಿಸ್‌ ರಸ್ತೆಯ ಆಟೋಮೊಬೈಲ್‌ ಅಂಗಡಿಯೊಂದರ ಮಾಲಕ ಸುವರ್ಣ ಪ್ರತಿಕ್ರಿಯಿಸಿ, “ಪ್ರತೀ ಬಾರಿ ಮಳೆ ಬಂದರೆ ನಮ್ಮ ಅಂಗಡಿಗೆ ನೀರು ನುಗ್ಗಿ ಅಪಾರ ಸ್ವತ್ತು ಹಾನಿಯಾಗುತ್ತದೆ. ಈ ಕುರಿತಂತೆ ಶಾಶ್ವತ ಪರಿಹಾರಕ್ಕೆ ಅನೇಕ ವರ್ಷಗಳಿಂದ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತತ್‌ಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಶಾಶ್ವತ ಪರಿಹಾರ ಒದಗಿಸಬೇಕು’ ಎನ್ನುತ್ತಾರೆ. ಪಚ್ಚನಾಡಿಯ ದೇವಿನಗರ ಎಂಬಲ್ಲಿ 2 ಮನೆಗಳ ತಡೆಗೋಡೆ ಕುಸಿದು ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next