Advertisement

ಯೋಗದಿಂದ ಸದೃಢ ಆರೋಗ್ಯ

11:33 PM Feb 10, 2020 | Sriram |

ಯೋಗಾಸನ ಮಾಡುವುದು ಬರಿಯ ಧ್ಯಾನವನ್ನು ಮಾತ್ರ ಒಳಗೊಂಡಿಲ್ಲ. ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಾಸನ ಹಲವು ಆಸನಗಳನ್ನು ಒಳಗೊಂಡಿದ್ದು ಇವು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ.

Advertisement

“ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ “ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ’. ಕೆಲವು ಆಸನಗಳಾದ ಅನುಸಾರ, ವಿನ್ಯಾಸ ಮತ್ತು ಬಿಕ್ರಮ ನಿಮ್ಮ ವಿನ್ಯಾಸ ವಿರುವ ದೇಹ ಆಕಾರಕ್ಕೆ ಕಾರಣವಾಗಿವೆ. ಅಧಿಕ ತೂಕವನ್ನು ಕಳೆದುಕೊಂಡು ಆರೋಗ್ಯಕರ ದೇಹ ಸಂಪತ್ತನ್ನು ಯೋಗ ಮೂಲಕ ಪಡೆದುಕೊಳ್ಳಬಹುದು.

ನೈಸರ್ಗಿಕ ಸಾಮರ್ಥ್ಯ
ಯೋಗ ಮಾಡುತ್ತಿರುವ ನಿಮ್ಮ ಸ್ನಾಯುಗಳು ಮೂಳೆಗಳು ಬೇಕಾದ ಆಕಾರದಲ್ಲಿ ಬಾಗುತ್ತವೆ. ಈ ರೀತಿಯ ಕಸರತ್ತು ಚಯಾಪಚಯ ಪ್ರಕ್ರಿಯೆಯನ್ನು ವೇಗಗೊಳಿಸಿ ಮೂಳೆ ಸ್ನಾಯು ಬಲಕ್ಕೆ ಕಾರಣವಾಗುತ್ತದೆ.

ದೇಹ ತಾಪಮಾನ ಸಕ್ರಿಯ
ಯೋಗಾಭ್ಯಾಸದಿಂದ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಪಕ್ವಗೊಂಡು ರಕ್ತ ಪರಿಚಲನೆ ಚೆನ್ನಾಗಿ ಆಗಲು ಸಹಕಾರಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತವೆ. ನಿಮ್ಮ ದೇಹದ ಆಂತರಿಕ ತಾಪ ಮಾನ ಕ್ರಿಯಾಶೀಲಗೊಂಡು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕರುಳಿನ ಆರೋಗ್ಯ
ಜಠರ ಕ‌ರುಳಿನ ವ್ಯೂಹದ ಕಡಿಮೆ ಒತ್ತಡವು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸಿ ದೇಹದ ತೂಕ ಏರುವಂತೆ ಮಾಡುತ್ತದೆ. ಜಡವಾಗಿರುವ ಜಠರವು ನಿಮ್ಮ ಚಯಾಪಚಯ ಪ್ರಕ್ರಿಯೆಯನ್ನು ನಿಧಾನಿಸುತ್ತದೆ. ಆದರೆ ಯೋಗವು ಜಠರದ ವೇಗವನ್ನು ತೀವ್ರಗೊಳಿಸಿ ಜೀರ್ಣಾಂಗ ವ್ಯೂಹವನ್ನು ಸಮರ್ಪಕಗೊಳಿಸಲು ನೆರವಾಗುತ್ತದೆ.

Advertisement

ವಿಷಕಾರಿ ತ್ಯಾಜ್ಯ ನಿರ್ವಹಣೆ
ಯೋಗವು ಕರುಳಿನಿಂದ ತ್ಯಾಜ್ಯ ವಿಷಕಾರಿ ಅಂಶಗಳನ್ನು ಹೊರಹಾಕಿ ಅದರ ಸ್ವತ್ಛತೆಯನ್ನು ಮಾಡುತ್ತದೆ. ಕರುಳಿನ ಸ್ವತ್ಛತೆಯಿಂದ ನಮಗೆ ಹಲವಾರು ರೋಗಗಳ ವಿರುದ್ಧ ಹೋರಾಡುವ ದೃಢತೆ ಉಂಟಾಗುತ್ತದೆ.

ಉತ್ತಮ ಆರೋಗ್ಯ
ಯೋಗ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಾ ಭ್ಯಾಸದ ನಿರಂತರತೆ ದೇಹಕ್ಕೆ ಶಕ್ತಿ ನೀಡುತ್ತದೆ.

ಥೈರಾಯ್ಡ ಆರೋಗ್ಯ
ಆರೋಗ್ಯಕರ ತೂಕವನ್ನು ನಿರ್ವಹಿಸುವಲ್ಲಿ ಥೈರಾಯ್ಡ ಗ್ರಂಥಿಯು ಮಹತ್ವದ ಪಾತ್ರ ವಹಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ.

ಕೊಬ್ಬು ನಿಯಂತ್ರಣ
ತಿರುಚುವ ಆಸನಗಳು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ. ವಿಷಕಾರಿ ಅಂಶಗಳು ಕೊಬ್ಬನ್ನು ಉಂಟುಮಾಡುವಲ್ಲಿ ಪಾತ್ರ ವಹಿಸಿ, ದೇಹದಲ್ಲಿ ವಿಪರೀತ ಕೊಬ್ಬು ಬೆಳೆಯುವುದಕ್ಕೆ ಕಾರಣವಾಗಿದೆ. ಯೋಗದಿಂದ ಈ ರೀತಿಯ ಅಂಶಗಳು ಹೊರಹೋಗಿ ದೇಹ ಹಗುರಾಗುತ್ತದೆ. ಅತಿಯಾದ ತೂಕವೂ ಇಳಿಯು ವುದರ ಜತೆಗೆ ಉಲ್ಲಾಸಭರಿತ ಜೀವನ ನಿಮ್ಮದಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next