Advertisement

ಕಟ್ಟುಮಸ್ತಾದ ದೇಹಕ್ಕೆ ವ್ಯಾಯಮ

08:35 AM Jan 22, 2019 | |

ಕಟ್ಟುಮಸ್ತಾದ ದೇಹವಿರಬೇಕು ಎಂಬುದು ಬಹುತೇಕ ಎಲ್ಲ ಯುವಕರ ಬಯಕೆ. ಕಟ್ಟುಮಸ್ತಾದ ದೇಹವನ್ನು ಪಡೆಯುವುದರ ಮೂಲಕ ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ. ಆದರೆ ಇದು ಅಷ್ಟು ಸುಲಭವಲ್ಲ. ಸತತ ವ್ಯಾಯಾಮ, ಸೂಕ್ತ ಆಹಾರ, ನಿದ್ರೆ ಕೂಡ ಇಲ್ಲಿ ಬಹುಮುಖ್ಯ. ಎದೆ, ಕೈಕಾಲುಗಳು ಮತ್ತು ಭುಜದ ಸ್ನಾಯುಗಳನ್ನು ಹುರಿಗಟ್ಟಿಸುವ ಮೂಲಕ ಸುಂದರ ಶರೀರವನ್ನು ಪಡೆಯಬಹುದು.

Advertisement

ಇದಕ್ಕಾಗಿ ಅತ್ಯುತ್ತಮ ವ್ಯಾಯಾಮಗಳು

•ಬಸ್ಕಿ
ತೊಡೆ ಮತ್ತು ಮೀನಖಂಡಗಳ ಸ್ನಾಯುಗಳನ್ನು ಹುರಿಗಟ್ಟಿಸಲು ಬಸ್ಕಿ, ತೂಕದೊಂದಿಗೆ ಬಸ್ಕಿ ನೆರವಾಗುತ್ತದೆ. ಬಸ್ಕಿಯಲ್ಲಿ ಯಾವುದೇ ತೂಕವಿಲ್ಲದೇ ಕೇವಲ ಕೈಗಳನ್ನು ಭೂಮಿಗೆ ಸಮಾನಾಂತರವಾಗಿ ಚಾಚುವ ಮೂಲಕ, ಸರಳ ತೂಕವನ್ನು ಹಿಡಿಯುವ ಮೂಲಕ ಉತ್ತಮ ವ್ಯಾಯಾಮ ದೊರಕುತ್ತದೆ. ತೂಕದೊಂದಿಗಿನ ಬಸ್ಕಿಯಲ್ಲಿ ಮಾತ್ರ ಹೆಚ್ಚಿನ ತೂಕದೊಂದಿಗೆ ನಿಲ್ಲುವ ಮೂಲಕ ತೊಡೆ ಮತ್ತು ಮೀನಖಂಡಗಳ ಸ್ನಾಯುಗಳು ಕೊಂಚ ಹೆಚ್ಚಿನ ಸೆಳೆತ ಪಡೆಯುತ್ತವೆ.

• ಅಲ್ಪದೂರವನ್ನು ಅತಿವೇಗವಾಗಿ ಕ್ರಮಿಸುವುದು
ದೇಹದ ಎಲ್ಲ ಸ್ನಾಯುಗಳಿಗೂ ಪೂರ್ಣ ಪ್ರಮಾಣದ ಸೆಳೆತ ನೀಡಲು ಸ್ಪ್ರಿಂಟ್ ಓಟ ಅತ್ಯುತ್ತಮವಾಗಿದೆ. ಆದರೆ ಈ ಓಟಕ್ಕೂ ಮೊದಲು ಶರೀರ ಸಂಪೂರ್ಣವಾಗಿ ಬೆಚ್ಚಗಾಗಿರುವುದು, ಎಲ್ಲ ಸೆಳೆತದ ವ್ಯಾಯಾಮಗಳನ್ನು ಪೂರ್ಣಗೊಳಿಸಿರುವುದು ಮುಖ್ಯ. ದಿನದ ವ್ಯಾಯಾಮದ ಕೊನೆಯ ಹಂತದಲ್ಲಿ ಈ ಓಟವನ್ನು ಓಡಿ ಶರೀರವನ್ನು ಪೂರ್ಣವಾಗಿ ದಣಿಸಿ ಬಳಿಕ ವಿಶ್ರಾಂತಿ ಪಡೆಯುವುದು ಆರೋಗ್ಯಕರ.

•  ಕಡಿಮೆ ತೂಕವನ್ನು ಬಳಸುವ ವ್ಯಾಯಾಮಗಳು
ಹೆಚ್ಚು ತೂಕವನ್ನು ಬಳಸಿ ಹತ್ತು ಬಾರಿ ಮಾಡುವ ವ್ಯಾಯಾಮಕ್ಕಿಂತ ಕಡಿಮೆ ತೂಕ ಬಳಸಿ ಪ್ರತಿಸಲ ಹತ್ತರಂತೆ ಐದು ಅಥವಾ ಹತ್ತು ಬಾರಿ ಪುನರಾವರ್ತಿಸುವುದರಿಂದ ಸ್ನಾಯುಗಳು ಹೆಚ್ಚು ಹುರಿಗಟ್ಟುತ್ತವೆ.

Advertisement

• ಸರಿಯಾಗಿ ನೀರು ಸೇವಿಸಿ
ದ್ರವ ಆಹಾರ ಮತ್ತು ನೀರನ್ನು ಹೆಚ್ಚು ಸೇವಿಸುವುದರಿಂದ ದೇಹದಾಡ್ಯರ್ ಮತ್ತು ಸ್ನಾಯುಗಳ ಬೆಳವಣಿಗೆ ಸದೃಢವಾಗಿ ಆಗುತ್ತದೆ. ದಿನವಿಡೀ ತುಂಬಾ ನೀರು ಕುಡಿಯಿರಿ. ಇದರಿಂದ ವ್ಯಾಯಾಮದ ವೇಳೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ವ್ಯಾಯಾಮದ ವೇಳೆ ಪ್ರತೀ 10- 20 ನಿಮಿಷಕ್ಕೊಮ್ಮೆ ನೀರು ಕುಡಿಯಿರಿ. ನಿರ್ಜಲೀಕರಣವಾದರೆ ಅದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಸ್ನಾಯುಗಳ ಬೆಳವಣಿಗೆಗೆ ಸೇವಿಸಬೇಕಾದ ಆಹಾರಗಳು
ಕೆಂಪು ಮಾಂಸದಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ಮಾಂಸಖಂಡಗಳ ಬೆಳವಣಿಗೆಗೆ ಮುಖ್ಯ. ದೇಹವನ್ನು ಕಟ್ಟು ಮಸ್ತಾಗಿಸಲು ಮೊಟ್ಟೆ ಕೂಡ ಮುಖ್ಯ. ವ್ಯಾಯಾಮದೊಂದಿಗೆ ಆಹಾರದಲ್ಲಿ ಪ್ರೋಟೀನ್‌ಗೆ ಹೆಚ್ಚಿನ ಆದ್ಯತೆ ಕೊಟ್ಟಾಗ ಕಟ್ಟುಮಸ್ತಾದ ದೇಹವನ್ನು ಪಡೆಯಲು ಸಾಧ್ಯವಿದೆ.

••ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next