Advertisement

ಜಿಲ್ಲೆಯ ಸಹಕಾರ ಬ್ಯಾಂಕುಗಳ ಅಭಿವೃದ್ಧಿಗೆ ಶ್ರಮಿಸಿ

03:55 PM Sep 25, 2022 | Team Udayavani |

ಶಿಡ್ಲಘಟ್ಟ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸಾಲ ಅಥವಾ ಬಡ್ಡಿ ಮನ್ನಾ ಮಾಡುವುದಿಲ್ಲ ಹೀಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ರೈತರು ಮಾಡಬೇಕೆಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಹಾಗೂ ಶಿಡ್ಲಘಟ್ಟ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಕೆಎಂ ಭೀಮೇಶ್‌ ಕರೆ ನೀಡಿದರು.

Advertisement

ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿ ಬ್ಯಾಂಕಿನ 84ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅವಳಿ ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆಯನ್ನು ಬಲಿಷ್ಟಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಹಿಂದಿನ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿ ಸರ್ಕಾರದಿಂದ ಯಾವುದೇ ರೀತಿಯ ನಿರೀಕ್ಷೆಗಳು ಇಟ್ಟಿಕೊಳ್ಳಬಾರದು ಸಹಕಾರಿ ಬ್ಯಾಂಕಿಗಳಿಂದ ಪಡೆದ ಸಾಲವನ್ನು ಮರುಪಾವತಿಸಿ ಬ್ಯಾಂಕುಗಳನ್ನು ಉಳಿಸಬೇಕು ಎಂದರು. ಶಿಡ್ಲಘಟ್ಟ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮೂಲಕ ಪಡೆದಿರುವ ಸಾಲವನ್ನು ಮರು ಪಾವತಿಸಬೇಕೆಂದು ಮನವಿ ಮಾಡಿ ಪ್ರಸ್ತುತ ಬ್ಯಾಂಕಿ ನಲ್ಲಿ ಶೇ.33 ಮಾತ್ರ ಸಾಲ ಮರುಪಾವತಿಯಾಗಿದೆ ಇದರಿಂದಾಗಿ ಬೇರೆ ರೈತರಿಗೆ ಸಾಲ ಸೌಲಭ್ಯ ನೀಡಲು ತೊಂದರೆ ಯಾಗಿದೆ. ಕನಿಷ್ಠ ಪಕ್ಷ ಬ್ಯಾಂಕಿನ ವಸೂಲಾತಿ ಪ್ರಮಾಣ 70 ಗಿಂತ ಅಧಿಕವಾಗಿದ್ದರೆ ಮಾತ್ರ ಸಾಲವನ್ನು ತಂದು ರೈತರಿಗೆ ನೀಡಬಹುದು. ವಾಣಿಜ್ಯ ಬ್ಯಾಂಕುಗಳಲ್ಲಿ ರೈತರ ಸಮಸ್ಯೆ ಗಳಿಗೆ ಸ್ಪಂದಿಸುವುದಿಲ್ಲ ಸಹಕಾರಿ ಬ್ಯಾಂಕುಗಳನ್ನು ಉಳಿಸಿ ಕೊಂಡು ರೈತರು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್‌ ಮಾತನಾಡಿ, ಶಿಡ್ಲ ಘಟ್ಟ ತಾಲೂಕಿನ ಭೂ ಅಭಿವೃದ್ಧಿ ಬ್ಯಾಂಕಿನ ಅಭಿವೃದ್ಧಿ ಗಾಗಿ ಡಿಸಿಸಿ ಬ್ಯಾಂಕಿನ ಅಗತ್ಯ ಎಲ್ಲಾ ರೀತಿಯ ಸಹ ಕಾರವನ್ನು ನೀಡಲಾಗುವುದು. ರೈತರು ಸಹಕಾರಿ ಬ್ಯಾಂಕು ಗಳಲ್ಲಿ ಠೇವಣಿ ಇಟ್ಟು ವ್ಯಾಪಾರ ವಹಿವಾಟು ನಡೆಸಬೇಕು ಇದರಿಂದ ಸಹಕಾರಿ ವ್ಯವಸ್ಥೆ ಬಲವರ್ಧನೆಗೊಳ್ಳುವ ಜೊತೆಗೆ ರೈತರ ಆರ್ಥಿಕ ಪರಿ ಸ್ಥಿತಿಯೂ ಸುಧಾರಣೆಯಾಗುತ್ತದೆ ಎಂದರು.

ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಂಕ್‌ ಮುನಿಯಪ್ಪ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸಿಕೆ ನಾರಾಯಣಸ್ವಾಮಿ ಮಾತ ನಾಡಿದರು. ನಿರ್ದೇಶಕರಾದ ಎಂಪಿ ರವಿ, ಡಿಸಿ ರಾಮಚಂದ್ರ, ಎಎಸ್‌ ಮಂಜುನಾಥ್‌, ಡಿ. ವಿ. ವೆಂಕಟೇಶಪ್ಪ, ಸಿ.ವಿ. ನಾರಾ ಯಣಸ್ವಾಮಿ, ಎಂ ಮುರಳಿ, ಸಿ ನಾರಾಯಣಸ್ವಾಮಿ, ಆಂಜ ನೇಯಗೌಡ, ಅನು ಸೂಯಮ್ಮ, ಸುನಂದಮ್ಮ ಹಾಗೂ ವ್ಯವ ಸ್ಥಾಪಕ ಸಿ.ಎನ್‌. ಕೃಷ್ಣನ್‌, ಮಾಜಿ ಅಧ್ಯಕ್ಷರಾದ ಮುನಿವೆಂಕಟ ಸ್ವಾಮಿ, ಚೀಮನ ಹಳ್ಳಿ ಗೋಪಾಲ್‌, ರಾಯಪ್ಪನಹಳ್ಳಿ ಅಶ್ವತ್ಥ ರೆಡ್ಡಿ, ರಾಮಚಂದ್ರ, ಜಿಪಂ ಮಾಜಿ ಸದಸ್ಯ ಎನ್‌.ಮುನಿಯಪ್ಪ ಇತರರಿದ್ದರು.

Advertisement

ಸಾಲ ವಸೂಲಾತಿಯಲ್ಲೂ ಆಸಕ್ತಿ ವಹಿಸಲು ಸಲಹೆ : ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಮತದಾರರನ್ನು ಕರೆ ತಂದು ಮತದಾನ ಮಾಡಲು ಉತ್ಸಾಹ ತೋರಿಸುವ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಅದೇ ರೀತಿ ರೈತರ ಸಾಲವನ್ನು ವಸೂಲಾತಿಯಲ್ಲಿ ಆಸಕ್ತಿ ತೋರಿಸಬೇಕು. ಜತೆಗೆ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಪಂಡಿತ್‌ ಪುರಸ್ಕೃತ ಹಿತ್ತಲಹಳ್ಳಿ ಗೋಪಾಲಗೌಡ ಮನವಿ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next